ಕಿಂಗ್‌, ರಾಹುಲ್‌ ಅಬ್ಬರದಾಟ: ಬಾಂಗ್ಲಾದೇಶಕ್ಕೆ 185 ರನ್‌ ಟಾರ್ಗೆಟ್‌,

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಡಿಲೇಡ್‌ ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾ ಪಂದ್ಯದಲ್ಲಿ ಓಪ್ನರ್‌ ಕೆ.ಎಲ್.ರಾಹುಲ್‌ ಹಾಗೂ ಕಿಂಗ್‌ ವಿರಾಟ್‌ ಕೊಹ್ಲಿ ಅಬ್ಬರದ ಆಟವಾಡಿದ್ದು ಬಾಂಗ್ಲಾದೇಶಕ್ಕೆ 185 ರನ್‌ ಟಾರ್ಗೆಟ್‌ ನೀಡಿದ್ದಾರೆ.

ಆರಂಭಿಕ ಆಟಗಾರ ಕೆ.ಎಲ್.‌ ರಾಹುಲ್‌ 32 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದು 3 ಬೌಂಡರಿ ಹಾಗೂ 4 ಸಿಕ್ಸರ್‌ ಸಿಡಿಸಿದ್ದಾರೆ. ಇನ್ನು ಅಡಿಲೇಡ್‌ ನಲ್ಲಿ ಕಿಂಗ್‌ ಕೊಹ್ಲಿ ಆಟಕ್ಕೆ ಸಾಟಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದು 44 ಎಸೆತಗಳಲ್ಲಿ ಅಜೇಯ 64 ರನ್‌ ಸಿಡಿಸಿದ್ದಾರೆ.

ಕೊಹ್ಲಿ ಹಾಗೂ ರಾಹುಲ್‌ ಅರ್ಧಶತಕಗಳೊಂದಿಗೆ ನಿಗದಿರ ಓವರ್‌ ಗಳಲ್ಲಿ ಭಾರತವು 6 ವಿಕೆಟ್ ಕಳೆದುಕೊಂಡು 184 ರನ್ ಬಾರಿಸಿದ್ದು, ಬಾಂಗ್ಲಾದೇಶ ತಂಡಕ್ಕೆ ಕಠಿಣ ಗುರಿ ನೀಡಿದೆ. ಭಾರತದ ಪಾಲಿಗೆ ಈ ಪಂದ್ಯ ಮಹತ್ವದ್ದಾಗಿದ್ದು ಬ್ಯಾಂಟಿಂಗ್‌ ನಲ್ಲಿ ತನ್ನ ಪ್ರಾಬಲ್ಯವನ್ನು ಅನಾವರಣ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!