ಮುಂಬೈನ ಗೊರೈ ಬೀಚ್‌ ನಲ್ಲಿ ಪ್ಲಾಸ್ಟಿಕ್ ಬಾಕ್ಸ್‌ಗಳಲ್ಲಿ 7 ತುಂಡುಗಳಾಗಿ ವ್ಯಕ್ತಿಯ ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮುಂಬೈನ ಗೊರೈ ಬೀಚ್‌ಗೆ ಹೋಗುವ ರಸ್ತೆಯಲ್ಲಿ 25 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ದೇಹದ 7 ತುಂಡುಗಳು ಪ್ಲಾಸ್ಟಿಕ್ ಬಾಕ್ಸ್​ಗಳಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹದ ಭಾಗಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪೊಲೀಸರ ಪ್ರಕಾರ, ಭಾನುವಾರದಂದು ಬೊರಿವಲಿ ಪಶ್ಚಿಮದ ಬಾಬರ್ ಪಾಡಾ, ಪಿಕ್ಸಿ ಹೋಟೆಲ್ ಬಳಿ ಪುರುಷನ ಶವ ಪತ್ತೆಯಾಗಿದೆ. ದೇಹವನ್ನು ಏಳು ಭಾಗಗಳಾಗಿ ಕತ್ತರಿಸಿ ನಾಲ್ಕು ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಲಾಗಿತ್ತು. ಮೃತರು 25 ರಿಂದ 40 ವರ್ಷ ವಯಸ್ಸಿನವರಾಗಿದ್ದು, ಕಡು ನೀಲಿ ಬಣ್ಣದ ಜೀನ್ಸ್ ಮತ್ತು ಕಪ್ಪು ಬೂಟುಗಳನ್ನು ಧರಿಸಿದ್ದರು. ಅವರ ಬಲಗೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರು.

ಮೀರಾ ರಸ್ತೆಯ ನಿವಾಸಿ ಸಂತೋಷ್ ಶಿಂಧೆ ಎಂಬುವವರು ಘಟನೆಯ ಬಗ್ಗೆ ತಿಳಿದು ಗೊರೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೊರೈ ಪೊಲೀಸರು ಬಾಬರ್‌ಪದ ಪ್ರದೇಶದ ಶೆಫಾಲಿ ಗ್ರಾಮದಿಂದ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಫೋರೆನ್ಸಿಕ್ ತಂಡವು ಪ್ರಕರಣದ ತನಿಖೆ ನಡೆಸುತ್ತಿದ್ದು, ಘಟನಾ ಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ವಿಚಾರಣೆ ನಡೆಯುತ್ತಿದೆ. ಪತ್ತೆಯಾಗಿರುವ ಮೃತದೇಹ ಇನ್ನೂ ಅಪರಿಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!