47ನೇ ವಯಸ್ಸಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ: ಭಾವನಾತ್ಮಕವಾಗಿ ಖುಷಿ ಹಂಚಿಕೊಂಡ ಹಿರಿಯ ಪುತ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ತನ್ನ ತಾಯಿ 47ನೇ ವಯಸ್ಸಿಯಲ್ಲಿ ಗರ್ಭ ಧರಿಸಿ, ಹೆಣ್ಣು ಮಗುವಿಗೆ ಜನ್ಮ ನೀಡಿರುವ ಖುಷಿಯನ್ನು ಸ್ವತಃ 23 ವರ್ಷದ ಮಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

ಹೌದು, ಆರ್ಯ ಪಾರ್ವತಿ ಎಂಬ 23 ವರ್ಷದ ಯುವತಿ ತನ್ನ ತಾಯಿ 47ನೇ ವಯಸ್ಸಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

ಆರಂಭದಲ್ಲಿ ನನ್ನ ತಾಯಿ 47ನೇ ವಯಸ್ಸಿನಲ್ಲಿ ಗರ್ಭ ಧರಿಸಿದ ಬಗ್ಗೆ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದೆ. ಸಮಯ ಕಳೆದಂತೆ ಸಂತಸವಾಗುತ್ತಿತ್ತು. ಇದೀಗ ನನ್ನ ಪುಟ್ಟ ತಂಗಿಯನ್ನು ಸ್ವಾಗತಿಸಿದ್ದೇನೆ. ನನಗೆ ತಂಗಿ ಬೇಕೆಂಬ ಆಸೆ ಇತ್ತು. ಆದರೆ ಕೆಲ ಸಮಸ್ಯೆಗಳಿಂದ ಈ ಮೊದಲು ತಾಯಿಗೆ ಮತ್ತೆ ಗರ್ಭ ಧರಿಸಲು ಸಾಧ್ಯವಾಗಿರಲಿಲ್ಲ ಎಂದು ಆರ್ಯ ಪಾರ್ವತಿ ಹೇಳಿಕೊಂಡಿದ್ದಾಳೆ.

ಕಳೆದ ವರ್ಷ ರಜೆಯ ಸಂದರ್ಭದಲ್ಲಿ ಮನೆಗೆ ಹೋಗಿದ್ದೆ. ಈ ವೇಳೆ ತಂದೆ ಸಂತಸದಿಂದ ಕರೆದು ನಿನ್ನ ಬಳಿ ಮಾತನಾಡಲು ಇದೆ ಎಂದು ಹೇಳಿದರು. ಏನೆಂದು ಕೇಳಿದಾಗ ಉತ್ಸಾಹದಲ್ಲಿ ಮಾತನಾಡುತ್ತಾ, ನೀನು ಅಕ್ಕನಾಗುತ್ತಿದ್ದೀಯ ಎಂದರು. ಒಂದು ಕ್ಷಣ ನಾನು ಗೊಂದಲಕ್ಕೊಳಗಾದೆ. ಅಮ್ಮನಿಗೆ ಆಗ 47 ವರ್ಷವಾಗಿತ್ತು. ಈ ಸುದ್ದಿ ನನಗೆ ಅನಿರೀಕ್ಷಿತವಾಗಿತ್ತು.ಬಳಿಕ ನಾನು ಅಮ್ಮನೊಂದಿಗೆ ಹೆಚ್ಚಿನ ಸಮಯ ಕಳೆಯಲು ಪ್ರಾರಂಭಿಸಿದೆ. ಅದೊಂದು ದಿನ ತಂದೆಯೊಂದಿಗೆ ದೇವಸ್ಥಾನಕ್ಕೆ ಹೋಗಿದ್ದಾಗ, ಅಮ್ಮನಿಗೆ ಇದ್ದಕ್ಕಿದ್ದಂತೆ ತಲೆತಿರುಗಿ ಮೂರ್ಛೆ ಹೋಗಿದ್ದಳು. ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿದಾಗ ಆಕೆ ಗರ್ಭಿಣಿ ಎಂಬುದು ಗೊತ್ತಾಗಿದೆ. ಸಾಮಾನ್ಯವಾಗಿ ಇಂತಹ ಸಂಗತಿಗಳನ್ನು ತಮ್ಮ ಮಕ್ಕಳಲ್ಲಿ ಹಂಚಿಕೊಳ್ಳು ಪಾಲಕರು ಹಿಂದೇಟು ಹಾಕುತ್ತಾರೆ. ವಾಸ್ತವವಾಗಿ ತಾಯಿ ಮತ್ತು ಮಗಳ ನಡುವಿನ ಬಾಂಧವ್ಯವು ವಯಸ್ಸನ್ನು ಮೀರಿದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ನನ್ನ ಅಮ್ಮ ಹೆಣ್ಣು ಮಗುವಿಗೆ ಜನ್ಮ ನೀಡುತ್ತಿದ್ದಂತೆ ನನ್ನ ಸಂತಸ ಇನ್ನಷ್ಟು ಹೆಚ್ಚಿದೆ ಎಂದು ಆರ್ಯ ಪಾರ್ವತಿ ಹೇಳಿದ್ದಾಳೆ.

ಅವಳು ನನ್ನನ್ನ ಅಕ್ಕ ಎಂದು ಕರೆಯುವವರೆಗೆ ಕಾಯಲು ನನ್ನಿಂದ ಸಾಧ್ಯವಿಲ್ಲ. ನನಗೂ ಅವಳಿಗೆ ಸಾಕಷ್ಟು ವಯಸ್ಸಿನ ಅಂತರವಿದೆ ಎಂದು ಜನರು ಮಾತನಾಡಿಕೊಳ್ಳುತ್ತಾರೆ. ಇದು ನನಗೆ ಮುಖ್ಯವಲ್ಲ. ಅವಳು ನನ್ನ ಜೀವನದಲ್ಲಿ ಬರುತ್ತಾಳೆ ಎಂದು ತಿಳಿದಿರಲಿಲ್ಲ. ತಂಗಿಯ ಆಗಮನದ ನಂತರ ನಾವು ಅವಳಿಂದ ದೂರವಿರಲು ಸಾಧ್ಯವಿಲ್ಲ ಎಂದು ಆರ್ಯ ಪಾರ್ವತಿ ತನ್ನ ಪುಟ್ಟ ಸಹೋದರಿ ಹಾಗೂ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!