ಬಿಸಿಲು ತಪ್ಪಿಸೋಕೆ ಪಾರ್ಕಿಂಗ್‌ನಲ್ಲಿ ಮಗು ಮಲಗಿಸಿದ ತಾಯಿ, ಕಾರು ಹರಿದು ಕಂದಮ್ಮ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳಬೇಕು ಎಂದು ದೊಡ್ಡವರು ಹೇಳುವ ಮಾತು ಸುಳ್ಳಲ್ಲ, ಒಂದು ನಿಮಿಷ ಅಜಾಗರೂಕತೆಯಿಂದ ವರ್ತಿಸಿದರೆ ಮಕ್ಕಳ ಪ್ರಾಣಕ್ಕೇ ಕಂಟಕ ಬರುವ ಪರಿಸ್ಥಿತಿ ಎದುರಾಗುತ್ತದೆ.

ಈ ಸುದ್ದಿಯಿಂದ ನೀವು ಎಚ್ಚೆತ್ತುಕೊಳ್ಳಿ. ಹೈದರಾಬಾದ್‌ನ ಹಯತ್‌ನಗರದ ಟೀಚರ್ಸ್‌ ಕಾಲೋನಿಯ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ನಲ್ಲಿ ಬಿಸಿಲಿದೆ ಎಂದು ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗುವನ್ನು ನೆಲದ ಮೇಲೆ ಮಲಗಿಸಿದ್ದಾರೆ.

ಮಗು ಇದೆ ಎಂದು ತಿಳಿಯದ ಚಾಲಕನೊಬ್ಬ ಪಾರ್ಕಿಂಗ್ ಮಾಡಿದ್ದು, ಮೂರು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ರಾಜು ಹಾಗೂ ಕವಿತಾ ದಂಪತಿ ಕರ್ನಾಟಕದವರಾಗಿದ್ದು, ಕೆಲಸ ಮಾಡಲು ಹೈದರಾಬಾದ್‌ಗೆ ವಲಸೆ ಬಂದಿದ್ದರು.

ಕಟ್ಟಡ ಕಾರ್ಮಿಕರಾದ ದಂಪತಿ ಅಪಾರ್ಟ್‌ಮೆಂಟ್ ಸಮೀಪದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನದ ಬಿಸಿಲಿನಿಂದ ಮಗುವನ್ನು ರಕ್ಷಿಸಲು ಅಪಾರ್ಟ್‌ಮೆಂಟ್ ಪಾರ್ಕಿಂಗ್‌ನಲ್ಲಿ ಮಗುವನ್ನು ಮಲಗಿಸಿದ್ದರು. ಕಾರ್ ಚಾಲಕ ರಾಮಕೃಷ್ಣ ಮಗುವನ್ನು ಗಮನಿಸದೇ ಮಗುವಿನ ಮೇಲೆ ಕಾರ್ ಹತ್ತಿಸಿದ್ದು, ಮಗುವನ್ನು ನೋಡಿದ ಮಹಿಳೆಯೊಬ್ಬರು ಜೋರಾಗಿ ಕೂಗಿದ್ದಾರೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!