ಕಾಸರಗೋಡು ಬಳಿಯ ಆಳ ಸಮುದ್ರದಲ್ಲಿ ಆತಂಕಹುಟ್ಟಿಸಿದೆ ‘ನಿಗೂಢ’ ಹಡಗು

ಸಾಂದರ್ಭಿಕ ಚಿತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಹೊಸದುರ್ಗ ಬಳಿಯ ಆಳ ಸಮುದ್ರದಲ್ಲಿ ಹಡಗೊಂದು ಕಾಣಿಸುತ್ತಿದ್ದು, ಆತಂಕಗೊಂಡಿರುವ ಸ್ಥಳೀಯರು ಇದೀಗ ಕರಾವಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಈ ಹಡುಗು ತೀರಕ್ಕೆ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಹಡಗಿನಲ್ಲಿ ಬಳಸಲಾದ ಬೆಳಕಿನ ಪ್ರಖರತೆ ರಾತ್ರಿಯಾಗುತ್ತಿದ್ದಂತೆ ಸಮುದ್ರ ತೀರಕ್ಕೆ ಕಾಣಿಸುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸಾಮಾನ್ಯವಾಗಿ ಕರಾವಳಿ ತಟ ರಕ್ಷಣಾ ಪಡೆ, ನೌಕಾಪಡೆಯ ಹಡಗುಗಳು ಮಾತ್ರ ಸಮುದ್ರ ದಡದ ಸಮೀಪ ಸಂಚರಿಸುತ್ತವೆ. ಈ ಹಡಗು ಯಾವುದು ಎಂಬ ಬಗ್ಗೆ ಅನುಮಾನಗಳು ನಾಗರಿಕರನ್ನು ಕಾಡುತ್ತಿದೆ.
ಈ ಬಗ್ಗೆ ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ತನಿಖೆಯ ಬಳಿಕವಷ್ಟೇ ನಿಜಾಂಶ ಹೊರಬೀಳಲಿದೆ. ಸ್ಥಳೀಯರ ಅನುಮಾನ ಪರಿಹಾರವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!