ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಮೊನ್ನೆಯಷ್ಟೇ 11ಜನರನ್ನು ಬಲಿಪಡೆದಿದ್ದ ರಷ್ಯಾ ಮತ್ತೊಮ್ಮೆ ಕ್ಷಿಪಣಿ ದಾಳಿ ನಡೆಸಿ 10ನಾಗರಿಕರ ಉಸಿರು ನಿಲ್ಲಿಸಿದೆ. ಜೊತೆಗೆ 20ಕ್ಕೂ ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಉಕ್ರೇನ್ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಮರೆಯುವ ಮುನ್ನವೇ ರಷ್ಯಾ ಮತ್ತೊಮ್ಮೆ ದಾಳಿ ನಡೆಸಿರುವುದು ಗಮನಾರ್ಹ. ಡೊನೆಟ್ಸ್ಕ್ ಪ್ರದೇಶದಲ್ಲಿ ಆರು ಜನರು, ಖರ್ಸನ್‌ನಲ್ಲಿ ಇಬ್ಬರು ಮತ್ತು ಖಾರ್ಕಿವ್‌ನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್‌ಗೆ ಶಕ್ತಿಶಾಲಿ ಯುದ್ಧ ಟ್ಯಾಂಕ್‌ಗಳನ್ನು ಕಳುಹಿಸುವುದಾಗಿ ಅಮೆರಿಕ ಮತ್ತು ರಷ್ಯಾ ಘೋಷಿಸಿರುವ ಹಿನ್ನೆಲೆಯಲ್ಲಿ ಈ ದಾಳಿಗಳು ನಡೆಯುತ್ತಿರುವುದು ಗಮನಾರ್ಹ.
ಪಶ್ಚಿಮದ ನೆರವಿನಿಂದ ಉಕ್ರೇನ್ ರಷ್ಯಾದ ದಾಳಿಯನ್ನು ಎದುರಿಸುತ್ತಿದೆ. ಅಮೆರಿಕ ಈಗಾಗಲೇ ಹಲವಾರು ಹಂತಗಳಲ್ಲಿ ಉಕ್ರೇನ್‌ಗೆ ಬೃಹತ್ ಶಸ್ತ್ರಾಸ್ತ್ರ ಮತ್ತು ತಾಂತ್ರಿಕ ನೆರವು ನೀಡಿದೆ. ಇತರ ದೇಶಗಳೂ ಮಿಲಿಟರಿ ನೆರವು ನೀಡಿವೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಯಾವುದೇ ಸಂದರ್ಭದಲ್ಲೂ ನಾವು ರಷ್ಯಾಕ್ಕೆ ಶರಣಾಗುವುದಿಲ್ಲ ಎಂದು ಉಕ್ರೇನ್ ಹೇಳಿದೆ.