ರಸ್ತೆಗೆ ಇಳಿಯಲು ಸಜ್ಜಾಗಿದೆ ತಾಲಿಬಾನ್​ ಸರಕಾರದಿಂದ ಹೊಸ ಕಾರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಪಘಾನಿಸ್ತಾನದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಉಗ್ರಗಾಮಿ ಸಂಘಟನೆ ತಾಲಿಬಾನ್​ (Taliban) ತನ್ನ ಮೂಲಭೂತವಾದಿ ಧೋರಣೆಗಳ ಮೂಲಕ ಪ್ರಜೆಗಳ ಮೇಲೆ ಅನೇಕ ಆದೇಶಗಳನ್ನು ಹೇರುತ್ತಿದೆ.

ಇದರ ನಡುವೆ ಹೊಸ ಆವಿಷ್ಕಾರಕ್ಕೂ ಹೊರಟಿದ್ದು, ಅದೇನೆಂದರೆ ಕಾರು.

ತಾಲಿಬಾನಿಗಳು ಹೊಸ ಕಾರೊಂದನ್ನು ಬಿಡುಗಡೆ ಮಾಡಿದ್ದೂ,ಲ್ಯಾಂಬೊರ್ಗಿನಿ ರೀತಿಯಲ್ಲಿ ಅತ್ಯಾಕರ್ಷಕ ನೋಟ ಹಾಗೂ ಅಷ್ಟೇ ಪವರ್ ಹೊಂದಿದೆ. ಕಾರಿನ ಮಾದ 9 (Mada 9) ಎಂದು ಹೆಸರಿಸಿಟ್ಟಿದ್ದು, ಅಲ್ಲಿನ ಉನ್ನತ ಶಿಕ್ಷಣ ಸಚಿವ ಅಬ್ದುಲ್​ ಬಾಖಿ ಹಕಾಕಿ ಅನಾವರಣ ಮಾಡಿದ್ದಾರೆ.

 

ಎಂಟೋಪ್​ (ENTOP.) ಎಂಬ ಕಂಪನಿಯು ಕಾರನ್ನು ತಯಾರಿಸಿದ್ದು, 30 ಎಂಜಿನಿಯರ್​ಗಳು ಕಾರಿನ ನಿರ್ಮಾಣದಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಲಾಗಿದೆ. ಕಾರು ಈಗ ಪ್ರೊಟೊಟೈಪ್​ ಸ್ಥಿತಿಯಲ್ಲಿದೆ. ಐದು ವರ್ಷಗಳ ಕಾಲ ಕೆಲಸ ಮಾಡಿ ಇದನ್ನು ನಿರ್ಮಿಸಲಿದ್ದು, ಕೆಲವೇ ದಿನಗಳಲ್ಲಿ ನಿಜವಾದ ಕಾರು ರಸ್ತೆಗೆ ಇಳಿಯಲಿದೆ ಎಂದು ತಾಲಿಬಾನ್ ಸರಕಾರ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!