August 12, 2026
Wednesday, August 12, 2026
spot_img

ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ: ಹಾರಿ ಮತ್ತೆ ಲಾಂಚ್‌ಪ್ಯಾಡ್‌ಗೆ ಮರಳಿದ ಚೀನಾ ರಾಕೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ದೇಶದ ಮೊದಲ ಮರುಬಳಕೆ ಮಾಡಬಹುದಾದ ಲಾಂಗ್ ಮಾರ್ಚ್-10B ರಾಕೆಟ್‌ ಯಶಸ್ವಿಯಾಗಿ ಉಡಾವಣೆಗೊಂಡು, ತನ್ನ ಕಾರ್ಯ ಪೂರ್ಣಗೊಳಿಸಿದ ಬಳಿಕ ಸುರಕ್ಷಿತವಾಗಿ ಉಡಾವಣಾ ವೇದಿಕೆಗೆ ಮರಳಿದೆ.

ಯಶಸ್ವಿ ಉಡಾವಣೆ

ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದಿಂದ ಉಡಾವಣೆಗೊಂಡ ರಾಕೆಟ್‌, ತನ್ನ ಪೇಲೋಡ್‌ ಅನ್ನು ನಿಗದಿತ ಕಕ್ಷೆಗೆ ಯಶಸ್ವಿಯಾಗಿ ತಲುಪಿಸಿತು. ಬಳಿಕ ಮೊದಲ ಹಂತದ ಬೂಸ್ಟರ್‌ ಸುರಕ್ಷಿತವಾಗಿ ಲಾಂಚ್‌ಪ್ಯಾಡ್‌ಗೆ ಮರಳುವ ಮೂಲಕ ಪರೀಕ್ಷೆ ಯಶಸ್ವಿಯಾಯಿತು.

ಇದನ್ನೂ ಓದಿ:

ವಿಫಲ ಪ್ರಯತ್ನದ ಬಳಿಕ ಸಕ್ಸಸ್

ಕಳೆದ ವರ್ಷ ಇದೇ ರೀತಿಯ ಮರುಬಳಕೆ ರಾಕೆಟ್‌ಗಳ ಲ್ಯಾಂಡಿಂಗ್‌ ಪ್ರಯತ್ನಗಳು ವಿಫಲವಾಗಿದ್ದವು. ಆದರೆ ಈ ಬಾರಿ ಚೀನಾ ಯಶಸ್ಸು ಸಾಧಿಸುವ ಮೂಲಕ ಮರುಬಳಕೆ ರಾಕೆಟ್‌ ತಂತ್ರಜ್ಞಾನದಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ.

ರಾಕೆಟ್‌ ವಿಶೇಷತೆ

ಸುಮಾರು 63 ಮೀಟರ್‌ ಎತ್ತರದ ಲಾಂಗ್ ಮಾರ್ಚ್-10B ದ್ರವ ಇಂಧನ ಚಾಲಿತ ವಾಣಿಜ್ಯ ರಾಕೆಟ್‌ ಆಗಿದ್ದು, ಮರುಬಳಕೆ ವ್ಯವಸ್ಥೆಯೊಂದಿಗೆ ಸುಮಾರು 16 ಟನ್‌ ಪೇಲೋಡ್‌ ಅನ್ನು ಕಕ್ಷೆಗೆ ಸಾಗಿಸುವ ಸಾಮರ್ಥ್ಯ ಹೊಂದಿದೆ. ಈ ಸಾಧನೆಯೊಂದಿಗೆ ಮರುಬಳಕೆ ರಾಕೆಟ್‌ ತಂತ್ರಜ್ಞಾನ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಚೀನಾ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !