ವಾಟ್ಸಾಪ್‌ ನಿಂದ ಸದ್ಯದಲ್ಲೇ ಹೊಸ ಫೀಚರ್‌ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರಸಿದ್ಧ ಮೆಸೆಜಿಂಗ್‌ ಅಪ್ಲಿಕೇಷನ್‌ WhatsApp ತನ್ನ ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಳಕೆದಾರರಿಗೆ ಬೇರೆ ಬೇರೆ ಡಿವೈಸ್‌ ಗಳ ನಡುವೆ ಚಾಟ್‌ಇತಿಹಾಸವನ್ನು (ಚಾಟ್‌ ಹಿಸ್ಟ್ರೀ) ಸಿಂಕ್‌ ಮಾಡಲು ಅನುಕೂಲವಾಗುವಂತಹ ಫೀಚರ್‌ ತರುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ ಇಂಟರ್ನೆಟ್‌ ಅಗತ್ಯವಿಲ್ಲದೇ ಬಳಕೆದಾರರು ತಮ್ಮ್‌ ವಾಟ್ಸಾಪ್‌ ಖಾತೆಗೆ ದ್ವಿತೀಯ ಮೊಬೈಲ್‌ ಸಾಧನವನ್ನು ಲಿಂಕ್‌ ಮಾಡಲು ಇದು ಅನುಮತಿಸುತ್ತದೆ. ಲಭ್ಯವಿರುವ ಮಾಹಿತಿ ಪ್ರಕಾರ ನಾಲ್ಕು ವಿಭಿನ್ನ ಸಾಧನಗಳನ್ನು ಒಂದೇ ಖಾತೆಗೆ ಲಿಂಕ್‌ ಮಾಡಲು ಇದು ಅನುಮತಿಸುತ್ತದೆ.

Wabetainfo ಪ್ರಕಾರ, ಈ ಫೀಚರ್‌ ನಿಂದ WhatsApp ಬಳಕೆದಾರರು ತಮ್ಮ WhatsApp ಖಾತೆಗೆ ಎರಡನೇ ಫೋನ್ ಅನ್ನು ಲಿಂಕ್ ಮಾಡಬಹುದಾಗಿದೆ. ಅಂದರೆ ಈಗ ನೀವು ಎರಡು ಫೋನ್‌ಗಳಲ್ಲಿ ಒಂದು WhatsApp ಖಾತೆಯನ್ನು ಬಳಸಬಹುದು. ಪ್ರಸ್ತುತ ಸೆಟಪ್ ಬಳಕೆದಾರರಿಗೆ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ WhatsApp ಅನ್ನು ಪ್ರವೇಶಿಸಲು ಅನುಮತಿಸುವುದಿಲ್ಲ. ಆದಾಗ್ಯೂ, ಬಳಕೆದಾರರು ತಮ್ಮ ಖಾತೆಗಳನ್ನು ಡೆಸ್ಕ್‌ಟಾಪ್, ಟ್ಯಾಬ್‌ಗಳು ಮತ್ತು ಇತರ ಸಾಧನಗಳಿಂದ ಪ್ರವೇಶಿಸಬಹುದು. ಪ್ರಸ್ತುತ ಈ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!