ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಗೂ ಮುನ್ನವೇ ನಟಿ ದಿವ್ಯಾ ಉರುಡುಗ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಹೌದು, ನಟಿ ದಿವ್ಯಾ ಉರುಡುಗ ಹೊಚ್ಚ ಹೊಸ ಕಾರನ್ನು ಖರೀದಿ ಮಾಡಿದ್ದಾರೆ.
ನಟಿ ದಿವ್ಯಾ ಖರೀದಿ ಮಾಡಿರೋ ಕಾರಿನ ಹೆಸರು ಅಟಾ ನೆಕ್ಸನ್ ಕ್ರಿಯೇಟಿವ್ ಎಸ್ ಡಾರ್ಕ್ ಆವೃತ್ತಿ. ಈ ಕಾರಿನ ಬೆಲೆಯೂ 12.60 ಲಕ್ಷ ರೂಪಾಯಿದ್ದಾಗಿದೆ ಎಂದು ಅಂದಾಜಿಸಲಾಗಿದೆ. ಈ ಕಾರ್‌ನ್ನು ದಿವ್ಯಾ ಪ್ರೀತಿಯಿಂದ ಭಗೀರ ಎಂದು ಕರೆದಿದ್ದಾರೆ.
ಹೊಸ ಕಾರನ್ನು ಖರೀದಿ ಮಾಡಿರೋ ಖುಷಿಯಲ್ಲಿ ನಟಿ ದಿವ್ಯಾ ಉರುಡುಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ, ಮತ್ತೊಬ್ಬ ಅಭಿಮಾನಿ ಎಲ್ಲಾ ಮಹಿಳೆಯರ ಸ್ಪೂರ್ತಿ ನಮ್ಮ ಹೆಮ್ಮೆಯ ದಿವ್ಯ ಊರುಡುಗ ಅಂತ ಕಾಮೆಂಟ್ ಮಾಡಿದ್ದಾರೆ.