ಏಷ್ಯನ್ ಗೇಮ್ಸ್​ನ ಹೊಸ ಇತಿಹಾಸ: ಕುದುರೆ ಸವಾರಿಯಲ್ಲಿ ಚಿನ್ನದ ಬೇಟೆಯಾಡಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಷ್ಯನ್ ಗೇಮ್ಸ್​ನ ಕುದುರೆ ಸವಾರಿ (ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್) ಸ್ಪರ್ಧೆಯಲ್ಲಿ ಭಾರತ ಹೊಸ ಇತಿಹಾಸ ನಿರ್ಮಿಸಿದೆ. ಫೈನಲ್ ಪಂದ್ಯದಲ್ಲಿ ಭಾರತೀಯ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ.

ಇದರೊಂದಿಗೆ 1982ರ ನಂತರ ಕುದುರೆ ಸವಾರಿಯಲ್ಲಿ ಚಿನ್ನದ ಪದಕ ಗೆದ್ದುಕೊಟ್ಟ ಹಿರಿಮೆಗೆ ಸುದೀಪ್ತಿ ಹಜೇಲಾ, ದಿವ್ಯಾಕೃತಿ ಸಿಂಗ್, ಹೃದಯ್ ಛೇಡಾ, ಅನುಷ್ ಅಗರ್‌ವಾಲಾ ಪಾತ್ರರಾಗಿದ್ದಾರೆ.

19ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಇದು ಮೂರನೇ ಚಿನ್ನವಾಗಿದೆ. ಇದಕ್ಕೂ ಮುನ್ನ ಭಾರತ ಶೂಟಿಂಗ್ ನಲ್ಲಿ ಒಂದು ಚಿನ್ನ ಹಾಗೂ ಮಹಿಳಾ ಕ್ರಿಕೆಟ್ ನಲ್ಲಿ ಮತ್ತೊಂದು ಚಿನ್ನ ಪದಕ ಗೆದ್ದಿತ್ತು. ಇದೀಗ ಕುದುರೆ ಸವಾರಿಯ ಟೀಮ್ ಸ್ವರ್ಣ ಪದಕಕ್ಕೆ ಕೊರೊಳೊಡ್ಡಿದ್ದಾರೆ.

ಪ್ರಸ್ತುತ ಪದಕ ಪಟ್ಟಿಯಲ್ಲಿ ಭಾರತ ತಂಡವು 6ನೇ ಸ್ಥಾನದಲ್ಲಿದೆ. ಭಾರತೀಯ ಕ್ರೀಡಾಪಟುಗಳು ಒಟ್ಟು 3 ಚಿನ್ನದ ಪದಕ, 4 ಬೆಳ್ಳಿ ಪದಕ ಮತ್ತು 7 ಕಂಚಿನ ಪದಕಗಳನ್ನು ತೆಗೆದುಕೊಂಡಿದ್ದಾರೆ. ಇನ್ನು 40 ಚಿನ್ನದ ಪದಕ, 21 ಬೆಳ್ಳಿ ಪದಕ ಮತ್ತು 9 ಕಂಚಿನ ಪದಕಗಳನ್ನು ಗೆದ್ದಿರುವ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!