ಬಾಲಿವುಡ್ ಹಿರಿಯ ನಟಿ ವಹೀದಾ ರೆಹಮಾನ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ (Bollywood) ನ ಹಿರಿಯ ನಟಿ, ನೃತ್ಯಗಾರ್ತಿ ವಹೀದಾ ರೆಹಮಾನ್ (Waheeda Rahman) ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ (Dada Saheb Phalke) ಪ್ರಶಸ್ತಿಯನ್ನು (Award) ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಈ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೋರ್ (Anurag Thakur) ಕೂಡ ಟ್ವೀಟ್ ಮಾಡಿ, ಹಿರಿಯ ನಟಿಯನ್ನು ಅಭಿನಂದಿಸಿದ್ದಾರೆ.

ಅಪ್ರತಿಮ ಸುಂದರಿ ಮತ್ತು ಅದ್ಭುತ ನಟಿಯಾಗಿರುವ ವಹೀದಾ ರೆಹಮಾನ್, ಮೂಲತಃ ದಕ್ಷಿಣ ಭಾರತದವರು. ತೆಲುಗು ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ವಹೀದಾ ನಂತರ ತಮಿಳಿನಲ್ಲೂ ಸಿನಿಮಾ ಮಾಡಿದರು. ಅಲ್ಲಿಂದ ಸೀದಾ ಕಾಲಿಟ್ಟಿದ್ದು ಬಾಲಿವುಡ್ ನತ್ತ.

ಬಾಲಿವುಡ್ ನ ಸೂಪರ್ ಸ್ಟಾರ್ ಗಳಾದ ರಾಜೇಶ್ ಖನ್ನಾ, ರಾಜ್ ಕಪೂರ್, ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ಹೀಗೆ ಅಷ್ಟೂ ಹೆಸರಾಂತ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು.

ಬಾಲಿವುಡ್ ಸಿನಿಮಾ ರಂಗದಲ್ಲಿ ಮೊದಲು ವಹೀದಾರನ್ನು ಗುರುತಿಸಿದ್ದು ಗುರುದತ್. ಮೊದಲ ಬಾರಿಗೆ ಅವರೇ ಹಿಂದಿ ಚಿತ್ರದಲ್ಲಿ ನಟಿಸುವಂತೆ ಅವಕಾಶ ನೀಡುತ್ತಾರೆ. ಸಿಐಡಿ ವಹೀದಾ ಅವರ ಮೊದಲ ಸಿನಿಮಾ. ಪ್ಯಾಸಾ, ತ್ರಿಶೂಲ್, ಅದಾಲತ್, ಕಭಿ ಕಭಿ, ದೆಹಲಿ 6 ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅವರು ವಿವಿಧ ಪಾತ್ರಗಳನ್ನು ಮಾಡಿದ್ದಾರೆ.

ವಹೀದಾ 1974ರಲ್ಲಿ ಶಗೂನ್ ಚಿತ್ರದಲ್ಲಿ ನಾಯಕನಾಗಿ ತಮ್ಮೊಂದಿಗೆ ನಟಿಸಿದ್ದ ಕಮಲ್ ಜಿತ್ ಸಿಂಗ್ ಅವರನ್ನು ಮದುವೆಯಾದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!