ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದ ದೇಶಾದ್ಯಂತ ನಗದು, ಮದ್ಯ, ಡ್ರಗ್ಸ್, ಉಚಿತ ಉಡುಗೊರೆ ಸೇರಿದಂತೆ ಸರಿಸುಮಾರು 9,000 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ ಎಂದು ಶನಿವಾರ ತಿಳಿಸಿದೆ.
ಮಾರ್ಚ್ 1 ರಿಂದ ಈವರೆಗೆ ವಶಪಡಿಸಿಕೊಂಡ ವಸ್ತುಗಳ ಒಟ್ಟಾರೆ ವಿವರವನ್ನು ಚುನಾವಣಾ ಆಯೋಗ ನೀಡಿದ್ದು, 75 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಸಹ ಆಯೋಗ ತಿಳಿಸಿದೆ.
2019ರ ಲೋಕಸಭಾ ಚುನಾವಣೆ ವೇಳೆ ಒಟ್ಟು 3,475 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದ್ರೆ ಈ ಬಾರಿ ಇನ್ನೂ 3 ಹಂತದ ಚುನಾವಣೆಗಳು ಬಾಕಿಯಿರುವಂತೆಯೇ ಹಿಂದಿನ ದಾಖಲೆ ಮುರಿದಿದೆ.
ಒಟ್ಟಾರೆ ದೇಶಾದ್ಯಂತ ಏಜೆನ್ಸಿಗಳು 8,889 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿವೆ. ಈ ಪೂಕಿ ಡ್ರಗ್ಸ್ ಪಾಲು 45%, ಅಂದ್ರೆ ಸುಮಾರು 3,958 ಕೋಟಿ ರೂ.ಗಳಷ್ಟಿದೆ. 849.15 ಕೋಟಿ ರೂ. ನಗದು, 814.85 ಕೋಟಿ ರೂ. ಮೌಲ್ಯದ 5.39 ಕೋಟಿ ಲೀಟರ್ ಮದ್ಯ, 1,200.33 ಕೋಟಿ ರೂ. ಮೌಲ್ಯದ ಲೋಹಗಳು, 2,006.56 ಕೋಟಿ ರೂ. ಉಚಿತ ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿದೆ.
ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಆಯೋಗ ವಶಪಡಿಸಿಕೊಂಡ ವಸ್ತುಗಳ ಪೈಕಿ ಗುಜರಾತ್‌ನ ಪಾಲು ಹೆಚ್ಚಿನದ್ದಾಗಿದೆ. ಗುಜರಾತ್ ರಾಜ್ಯವೊಂದರಲ್ಲೇ ಒಟ್ಟು 1,461.73 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 892 ಕೋಟಿ ರೂ. ಮೌಲ್ಯದ ಡ್ರಗ್ಸ್ ಒಳಗೊಂಡಿದೆ ಎಂದು ಆಯೋಗ ಮಾಹಿತಿ
ದೇಶಾದ್ಯಂತ ಮಾದರಿ ನೀತಿ ಸಂಹಿತಿ ಉಲ್ಲಂಘಟನೆ ಸಂಬಂಧ ಒಟ್ಟು 4.24 ಲಕ್ಷ ದೂರುಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 4,23,908 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು, 409 ದೂರುಗಳು ಪ್ರಗತಿಯಲ್ಲಿವೆ. ಸ್ವೀಕರಿಸಲಾದ ಒಟ್ಟು ದೂರಿನಲ್ಲಿ ಶೇ.89 ದೂರುಗಳಿಗೆ 100 ನಿಮಿಷಗಳ ಕಾಲಮಿತಿಯಲ್ಲೇ ಪರಿಹಾರ ಒದಗಿಸಲಾಗಿದೆ ಎಂದು ಆಯೋಗ ವಿವರಿಸಿದೆ.