ಹೊಸದಿಗಂತ ಡಿಜಿಟಲ್ ಡೆಸ್ಕ್:
ನನಗೆ ದೇವರಾಜೇಗೌಡ ಪರಿಚಯವೇ ಇಲ್ಲ. ಬೌರಿಂಗ್ ಕ್ಲಬ್‌ಗೆ ಊಟಕ್ಕೆ ಹೋಗಿದ್ದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಡಿಕೆಶಿ ನಮ್ಮ ಜೊತೆ ಮಾತಾಡಿಯೂ ಇಲ್ಲ. ದೇವರಾಜೇಗೌಡಗೂ ನನಗೂ ಸಂಬಂಧ ಇಲ್ಲ. ನಮ್ಮ ಬಗ್ಗೆ ಮಾತಾನಾಡುವ ನೈತಿಕ ಹಕ್ಕಿಲ್ಲ ಎಂದು ತಿರುಗೇಟು ನೀಡಿದರು.
ದೇವರಾಜೇಗೌಡ ಮುಖವನ್ನು ನಾನು ಟಿವಿಯಲ್ಲೇ ನೋಡಿದ್ದು. ಈ ಮೊದಲು ದೇವರಾಜೇಗೌಡ, ಗೌಡರ ಕುಟುಂಬದ ವಿರುದ್ಧ ಹೋರಾಡಿದ್ದ. ಈಗ ಪರ ಮಾತಾಡ್ತಿದ್ದಾನೆ ಅಂದ್ರೆ ಏನು? ನಾನು ಬೌರಿಂಗ್ ಕ್ಲಬ್‌ಗೆ ಊಟಕ್ಕೆ ಒಂದು ಸಲ ಹೋಗಿದ್ದೆ. ಅದು ಎಲೆಕ್ಷನ್‌ಗೂ ಮುಂಚೆ ಫೆಬ್ರವರಿಯಲ್ಲಿ ಹೋಗಿದ್ದೆ. ಗೋಪಾಲಸ್ವಾಮಿ ನಮ್ಮ ಪಕ್ಷದ ಮಾಜಿ ಎಂಎಲ್‌ಸಿ, ದೇವರಾಜೇಗೌಡ ಆರೋಪದ ತನಿಖೆ ಬಗ್ಗೆ ಮಾತಾಡೋದಕ್ಕೆ ನಾನು ಗೃಹ ಸಚಿವ ಅಲ್ಲ, ಸಿಎಂ ಕೂಡ ಅಲ್ಲ. ಹಾಗಾಗಿ ಎಸ್‌ಐಟಿ ತನಿಖೆ ಮಾಡಲಿ ಎಂದು ಆಗ್ರಹಿಸಿದರು. ಇದೇ ವೇಳೆ, ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ ಎಂದು ಹೇಳಿದರು.