ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರ್ಕೆಟ್‌ನಲ್ಲಿ ದಿನಕ್ಕೊಂದು ಹೊಸ ಸ್ಕ್ಯಾಮ್ ಮಾಡೋದಕ್ಕೆ ವಂಚಕರು ಕಾದು ಕುಳಿತಿದ್ದು, ಇದೀಗ ಅಂತ್ಯಸಂಸ್ಕಾರದ ಹೆಸರಿನಲ್ಲಿ ಸ್ಕ್ಯಾಮ್ ನಡೆಯುತ್ತಿದೆ.
ಹೌದು, ಅಂತ್ಯಸಂಸ್ಕಾರವನ್ನು ಶಾಸ್ತ್ರೋತ್ರವಾಗಿ ನಡೆಸಲು ಏಜೆನ್ಸಿಗಳಿವೆ. ಅಲ್ಲಿ ಪುರೋಹಿತರು, ಹೂವುಗಳು ಎಲ್ಲ ರೀತಿಯ ಅರೇಂಜ್‌ಮೆಂಟ್ಸ್ ಮಾಡಿಕೊಡಲಾಗುತ್ತದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡ ಸ್ಕ್ಯಾಮರ್ಸ್ ಮೋಸ ಮಾಡಲು ಕಾದು ಕುಳಿತಿದ್ದಾರೆ.
ಈ ರೀತಿ ಅಂತ್ಯಸಂಸ್ಕಾರ ನಡೆಸುವ ಹಲವು ಎಜೆನ್ಸಿಗಳ ಜಾಹೀರಾತು, ನಂಬರ್ ಸುಲಭವಾಗಿ ಸಿಗುತ್ತದೆ. ಹೀಗೆ ನೀವು ಆಪ್ತರನ್ನು ಕಳೆದುಕೊಂಡ ನೋವಿನಲ್ಲಿ ಎಜೆನ್ಸಿಗೆ ಕರೆ ಮಾಡಿ ಅಂತ್ಯಸಂಸ್ಕಾರಕ್ಕೆ ನಡೆಸಬೇಕು ಎಂದು ಕೇಳಿಕೊಂಡರೆ ತಕ್ಷಣವೇ ನಿಮ್ಮ ಮಾಹಿತಿ ಪಡೆದು ಲಿಂಕ್ ಕಳುಹಿಸಿದ್ದಾರೆ. ಈ ಲಿಂಕ್‌ನಲ್ಲಿ ನೀವು ನಿಮ್ಮ ಹೆಸರು ವಿಳಾಸ, ಮೃತಪಟ್ಟವರ ಹೆಸರು, ಧರ್ಮ, ಗೋತ್ರ, ಅಂತ್ಯಸಂಸ್ಕಾರ ಸಂಪ್ರದಾಯದ ಬಗ್ಗೆ ಮಾಹಿತಿ ನೀಡಬೇಕು. ಬಳಿಕ 5,000 ರೂಪಾಯಿ ಅಥವಾ ಅಡ್ವಾನ್ಸ್ ಮೊತ್ತವನ್ನು ಪಾವತಿಸಬೇಕು. ತಕ್ಷಣವೇ ನಿಮಗೆ ಮೆಸೇಜ್ ಬರಲಿದೆ. ಅಂತ್ಯಸಂಸ್ಕಾರ ನಡೆಸುವ ಪೂಜಾರಿ ಹೆಸರು, ಘಳಿಗೆ ಸೇರಿದಂತೆ ಎಲ್ಲದರ ಕರ್ಮಫೇಶನ್ ಮೆಸೇಜ್ ಬರಲಿದೆ. ಇದೇ ವೇಳೆ ಒಟಿಪಿಯೊಂದು ಬರಲಿದೆ. ಈ ಒಟಿಪಿಯನ್ನು ಎಜೆನ್ಸಿ ಮಂದಿ ಕೇಳುತ್ತಾರೆ. ಇದಕ್ಕೆ ಹಲವು ಕಾರಣಗಳನ್ನು ನೀಡುತ್ತಾರೆ.
ನೀವು ಎಲ್ಲವೂ ಅಚ್ಚುಕಟ್ಟಾಗಿ ಆಗಲಿ ಎಂದ ನೋವಿನಿಂದಲೇ ಒಟಿಪಿ ಹಂಚಿಕೊಂಡರೆ ಕತೆ ಮುಗೀತು. ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣ ಮಾಯವಾಗಲಿದೆ. ಇಲ್ಲಿ ಮತ್ತೊಂದು ಎಚ್ಚರವಹಿಸಬೇಕು. ನಿಮ್ಮಲ್ಲಿ ಒಟಿಪಿ ಕೇಳದೆಯೂ ವಂಚನೆ ನಡೆಯುತ್ತದೆ. ವಂಚಕರು ಹಂಚಿಕೊಂಡ ಲಿಂಕ್ ಕ್ಲಿಕ್ ಮಾಡಿದರೆ ಸಾಕು ಮಾಲ್‌ವೇರ್ ವೈರಸ್ ನಿಮ್ಮ ಫೋನ್ ಸೇರಿಕೊಳ್ಳಲಿದೆ. ಇದರಿಂದ ನಿಮ್ಮ ಫೋನ್‌ನ ವೈಯುಕ್ತಿಕ ಮಾಹಿತಿ ಸೋರಿಕೆ ಮಾಡಿ ಬಳಿಕ ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಾರೆ.
ಈ ಸ್ಕ್ಯಾಮ್‌ಗಳಿಂದ ಜಾಗೃತರಾಗಿರಿ, ನಿಮಗೆ ಮೋಸ ಆದಲ್ಲಿ ಇತರರಿಗೂ ಮೋಸ ಆಗದಂತೆ ಮಾಹಿತಿ ನೀಡಿ. ಖದೀಮರನ್ನು ಹಿಡಿಯಲು ಪೊಲೀಸರಿಗೆ ಮಾಹಿತಿ ನೀಡಿ.