ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ಅಂಬಟಿಪಲ್ಲಿ ಗ್ರಾಮದ ಹನುಮಾನ್ ದೇವಸ್ಥಾನದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಗ್ರಾಮದಲ್ಲಿ ತಮ್ಮ ರಕ್ಷಣೆ ಮಾಡ್ತಿದ್ದ ಹನುಮಂತನ ಮೂರ್ತಿ ಸುಟ್ಟು ಕರಕಲಾಗಿರುವುದರಿಂದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಮಹದೇವಪುರ ಮಂಡಲದ ಅಂಬಟಿಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಅಮರೇಶ್ವರ ದೇವಸ್ಥಾನದ ಆವರಣದಲ್ಲಿ ಹನುಮಂತನ ವಿಗ್ರಹವಿದೆ. ಗುರುವಾರ ಸಂಜೆ ಹನುಮಾನ್ ದೇವಸ್ಥಾನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಇಡೀ ಹನುಮಾನ್ ಪ್ರತಿಮೆಗೆ ವ್ಯಾಪಿಸಿದೆ ಮೂರ್ತಿ ಸುಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ನೀರು ಸುರಿದು ಬೆಂಕಿ ನಂದಿಸಿದ್ದಾರೆ. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಆತಂಕ ವ್ಯಕ್ತವಾಗಿದೆ.