Wednesday, March 29, 2023

Latest Posts

ರಾಜಧಾನಿ ಬೆಂಗಳೂರಿನ ತಾಜ್‌ವೆಸ್ಟ್ ಎಂಡ್ ಆವರಣದ ಮೇಲೆ ‘ನೋ ಫ್ಲೈ ಝೋನ್’ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫೆಬ್ರವರಿ 5 ರಿಂದ ಜಿ20 ಶೃಂಗಸಭೆ ನಡೆಯಲಿದ್ದು, ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ ತಾತ್ಕಾಲಿಕವಾಗಿ ನೋ ಫ್ಲೈ ಝೋನ್ ಜಾರಿ ಮಾಡಲಾಗಿದೆ.

ಈ ಬಾರಿ ಭಾರತದ ಹಲವು ಭಾಗಗಳಲ್ಲಿ ಸಭೆ ನಡೆಯಲಿದ್ದು, ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿಯೂ ಸಭೆ ನಡೆಯಲಿದೆ. ಇಲ್ಲಿ ಗಣ್ಯರು, ವಿವಿಐಪಿಗಳು ಭಾಗಿಯಾಗಲಿದ್ದು, ನೋ ಫ್ಲೈ ಝೋನ್ ಜಾರಿಗೊಳಿಸಲಾಗಿದೆ.

ಫೆ.5ರಿಂದ 11ರವರೆಗೆ ನೋ ಫ್ಲೈ ಜೋನ್ ಜಾರಿಯಲ್ಲಿರಲಿದೆ. ಹೊಟೇಲ್‌ನ ಸುತ್ತಮುತ್ತ ಒಂದು ಕಿ.ಮೀವರೆಗೂ ಇದು ಜಾರಿಯಲ್ಲಿರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!