ನಕಲಿ ನಾಣ್ಯ ಸಾಗಾಟ: 9 ಲಕ್ಷ ಮೌಲ್ಯದ 1,5,10 ರೂಪಾಯಿ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈನಲ್ಲಿ 9 ಲಕ್ಷಕ್ಕೂ ಹೆಚ್ಚು ಮೌಲ್ಯದ ನಕಲಿ ನಾಣ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚೀಲಗಳಲ್ಲಿ 1, 5 ಮತ್ತು10ರೂಪಾಯಿ ನಕಲಿ ನಾಣ್ಯಗಳು ಪತ್ತೆಯಾಗಿವೆ. ನಕಲಿ ನಾಣ್ಯಗಳ ಬಗ್ಗೆ ಮಾಹಿತಿ ಪಡೆದ ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಲಾಡ್ ಪ್ರದೇಶದ ವಲ್ಲಭ ಬಿಲ್ಡಿಂಗ್ ಬಳಿ ಸಾಗುತ್ತಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕಾರಿನಲ್ಲಿದ್ದ ಚೀಲಗಳನ್ನು ತಪಾಸಣೆ ನಡೆಸಿದಾಗ ನಕಲಿ ನಾಣ್ಯಗಳು ಪತ್ತೆಯಾಗಿವೆ. ಜಿಗ್ನೇಶ್ ಗಾಲಾ ಎಂಬ 42 ವರ್ಷದ ವ್ಯಕ್ತಿಯನ್ನು ಬಂಧಿಸಿ ದೆಹಲಿ ಪೊಲೀಸರಿಗೆ ಒಪ್ಪಿಸಲಾಯಿತು. ಒಟ್ಟು 9.46 ಲಕ್ಷ ಮೌಲ್ಯದ ನಕಲಿ ನಾಣ್ಯಗಳು ಪತ್ತೆಯಾಗಿವೆ ಎಂದು ತಿಳಿಸಿದರು. ಹರಿಯಾಣದಲ್ಲಿ ನಕಲಿ ಕರೆನ್ಸಿ ಕಾರ್ಖಾನೆಯಿದ್ದು, ಅದರ ಮೇಲೆ ದಾಳಿ ನಡೆಸಿದ ವಿಶೇಷ ಸೆಲ್ ಅಧಿಕಾರಿಗಳು ಐವರನ್ನು ಬಂಧಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂಬೈಗೆ ಕಾರಿನಲ್ಲಿ ಭಾರಿ ಪ್ರಮಾಣದ ನಕಲಿ ನಾಣ್ಯಗಳು ಹೋಗಿರುವುದನ್ನು ಪತ್ತೆ ಹಚ್ಚಿ ಅಲ್ಲಿಗೆ ತೆರಳಿ ಅವರನ್ನು ಹಿಡಿದಿದ್ದಾರೆ. ಆರೋಪಿಗಳು ಪ್ರಾರ್ಥನಾ ಮಂದಿರಗಳಲ್ಲಿ ನಕಲಿ ನಾಣ್ಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಪತ್ತೆಯಾಗಿದೆ. ಈ ಅವ್ಯವಹಾರ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!