ಮುಂಬೈನಲ್ಲಿ ದಡಾರಕ್ಕೆ ಒಂದು ವರ್ಷದ ಮಗು ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನಲ್ಲಿ ಒಂದು ವರ್ಷದ ಬಾಲಕಿ ದಡಾರ ವೈರಲ್ ಸೋಂಕಿಗೆ ಸಾವನ್ನಪ್ಪಿದ್ದಾಳೆ.
ಮಗುವಿನ ಸಾವಿಗೆ ತೀವ್ರವಾದ ಉಸಿರಾಟದ ತೊಂದರೆ ಸಿಂಡ್ರೋಮ್ (ARDS) ಮತ್ತು ದಡಾರದೊಂದಿಗೆ ತೀವ್ರವಾದ ಬ್ರಾಂಕೋಪ್ನ್ಯುಮೋನಿಯಾ ಕಾರಣವೆಂದು ಹೇಳಲಾಗಿದೆ.

ರೋಗಲಕ್ಷಣಗಳು ಕಾಣಿಸಿಕೊಂಡ ಮೂರು ದಿನಗಳ ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನವೆಂಬರ್ 11 ರಂದು ಆಕೆಗೆ ಹೃದಯ ಸ್ತಂಭನವಾಗಿತ್ತು. ಮಕ್ಕಳ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಆದರೆ ಇದೀಗ ಸಾವನ್ನಪ್ಪಿದ್ದಾಳೆ.

ಮಹಾರಾಷ್ಟ್ರದಲ್ಲಿ ಇಂದು 20 ಹೊಸ ದಡಾರ ಪ್ರಕರಣಗಳು ವರದಿಯಾಗಿದ್ದು, ಸೋಂಕಿನ ಸಂಖ್ಯೆ 220 ಕ್ಕೆ ಏರಿದೆ ಎಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ.

ಮುಂಬೈನಲ್ಲಿ ದಡಾರ ಏಕಾಏಕಿ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ನಾಗರಿಕರು ಒಂಬತ್ತು ತಿಂಗಳಿಂದ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವಂತೆ ಮನವಿ ಮಾಡಲಾಗಿದೆ ಎಂದು ನಾಗರಿಕ ಸಂಸ್ಥೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!