ಹೆಪಟೈಟಿಸ್‌ ಕಾಯಿಲಗೆ ವ್ಯಕ್ತಿ ಬಲಿ: ಕೇರಳದಲ್ಲಿ ಅಲರ್ಟ್ ಸೂಚಿಸಿದ ಆರೋಗ್ಯ ಇಲಾಖೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಹೆಪಟೈಟಿಸ್‌ ಕಾಯಿಲೆಯಿಂದಾಗಿ ಶುಕ್ರವಾರ 41 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ .

ಕಳೆದ ಮೂರು ತಿಂಗಳಲ್ಲಿ ಕೇರಳದಲ್ಲಿ ಆರು ಜನರಲ್ಲಿ ಹೆಪಟೈಟಿಸ್‌ ಕಾಯಿಲೆ ದೃಢಪಟ್ಟಿದೆ. ಹೀಗಾಗಿ ಜಾಗರೂಕರಾಗಿರುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಲಪ್ಪುರಂ ಜಿಲ್ಲಾ ಆರೋಗ್ಯಾಧಿಕಾರಿ ರಾ. ರೇಣುಕಾ, ಜನವರಿಯಿಂದ ಇಲ್ಲಿಯವರೆಗೆ 1,032 ಜನರಲ್ಲಿ ಕಾಯಿಲೆ ದೃಢಪಟ್ಟಿದೆ. 3,184 ಶಂಕಿತ ಹೆಪಟೈಟಿಸ್‌ ಇರಬಹುದು ಎಂದು ಶಂಕಿಸಲಾಗಿದೆ. ಮೃತ ಐವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಐವರು ಹೆಪಟೈಟಿಸ್‌ ಶಂಕಿತರೂ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ವೈರಸ್‌ಗಳ ಗುಂಪಿಗೆ ಸೇರಿದ ಸೂಕ್ಷ್ಮಾಣುಜೀವಿಗಳಿಂದ ಹೆಪಟೈಟಿಸ್ ಉಂಟಾಗುತ್ತದೆ.

ಹೆಪಟೈಟಿಸ್‌ ಲಕ್ಷಣಗಳೆಂದರೆ

ಜ್ವರ, ಹಸಿವಿನ ಕೊರತೆ, ವಾಕರಿಕೆ, ವಾಂತಿ, ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು, ಹಳದಿ ಮೂತ್ರದಂತಹ ರೋಗಲಕ್ಷಣಗಳು ಕಂಡುಬರುತ್ತವೆ.

ತೀವ್ರತರವಾದ ಪ್ರಕರಣಗಳಲ್ಲಿ, ಯಕೃತ್ತಿನ ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು, ಇದು ಸಾವಿಗೂ ಕಾರಣವಾಗಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!