ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ ಪಿಕಪ್ ವಾಹನ ಚಾಲಕ! ಏನಾಯ್ತು ನೀವೇ ಓದಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೋಲ್ ಗೇಟ್ ತಪ್ಪಿಸಲು ಹೋಗಿ ಟೋಲ್ ಸಿಬ್ಬಂದಿಗೆ ಗುದ್ದಿಸಿಕೊಂಡು ಹೋದ ಘಟನೆ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಬಳಿ ನಡೆದಿದೆ.

ಟೋಲ್ ತಪ್ಪಿಸಲು ರಾಂಗ್ ಸೈಡ್‌ನಲ್ಲಿ ಚಾಲಕ ಬಂದಿದ್ದಾನೆ. ಇದನ್ನು ತಡೆಯಲು ಹೋದ ಸಿಬ್ಬಂದಿಗೆ ಗುದ್ದಿಸಿ ಎಸ್ಕೇಪ್ ಆಗಿದ್ದಾನೆ. ಇದೇ ವೇಳೆ ಪಾದಚಾರಿಗೂ ಗುದ್ದಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪಾದಚಾರಿ, ಡ್ರೈವರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ.

ಇನ್ನು ಈ ಸಂಬಂಧ ಚಾಲಕನ ವಿರುದ್ಧ ಟೋಲ್ ಸಿಬ್ಬಂದಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!