ಏರ್​ ಇಂಡಿಯಾ ಕಾಕ್‍ಪಿಟ್‍ಗೆ ಸ್ನೇಹಿತೆ ಕರೆದೊಯ್ದ ಪೈಲೆಟ್: ಸಿಇಒಗೆ ಶೋಕಾಸ್ ನೋಟಿಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಮಾನದ ಕಾಕ್‍ಪಿಟ್ (Cockpit) ಪ್ರವೇಶಿಸಲು ಸ್ನೇಹಿತೆಗೆ ಅನುಮತಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್​ ಇಂಡಿಯಾ ಸಿಇಒ ವಿಲ್ಸನ್​ ಕ್ಯಾಂಪ್​ಬೆಲ್​ಗೆ ಡಿಜಿಸಿಎ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಘಟನೆಯ ಕುರಿತು ಡಿಜಿಸಿಎಗೆ ಸಮಯೋಚಿತ ವರದಿ ಮಾಡದಿದ್ದಕ್ಕಾಗಿ ಏರ್ ಇಂಡಿಯಾ ಸಿಇಒ ಮತ್ತು ವಿಮಾನ ಸುರಕ್ಷತಾ ಮುಖ್ಯಸ್ಥರಿಗೆ ಏ.21 ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೂ ಇಲ್ಲಿಯವರೆಗೂ ಏರ್ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏರ್ ಇಂಡಿಯಾ ಸುರಕ್ಷತಾ ಸೂಚನೆಗಳನ್ನು ಉಲ್ಲಂಘಿಸಿದೆ ಎಂದು ಡಿಜಿಸಿಎಯ ಹಿರಿಯ ಅಧಿಕಾರಿ ಭಾನುವಾರ ತಿಳಿಸಿದ್ದಾರೆ.

ಘಟನೆಯ ತನಿಖೆಯಲ್ಲಿ ವಿಳಂಬವಾಗಿದೆ. ಶೋಕಾಸ್ ನೋಟಿಸ್‍ಗೆ ಉತ್ತರಿಸಲು ಇಬ್ಬರೂ ಕಾರ್ಯನಿರ್ವಾಹಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ದುಬೈ (Dubai), ದೆಹಲಿ (Delhi) ವಿಮಾನದ ಸಂಪೂರ್ಣ ಸಿಬ್ಬಂದಿಯನ್ನು ಡಿ ರೋಸ್ಟರ್ ಮಾಡುವಂತೆ ಡಿಜಿಸಿಎ ಏರ್ ಇಂಡಿಯಾಗೆ ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆ.27 ರಂದು ದುಬೈ ಹಾಗೂ ದೆಹಲಿ ನಡವೆ ಸಂಚರಿಸುವ ವಿಮಾನದಲ್ಲಿ ಪೈಲಟ್ ಸ್ನೇಹಿತೆಗೆ ಕಾಕ್‍ಪಿಟ್ ಪ್ರವೇಶಕ್ಕೆ ಅನುಮತಿ ನೀಡಿ, ಒಳಗೆ ಬಿಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!