Friday, June 9, 2023

Latest Posts

ಏಕಾಏಕಿ ಕೆಳಗೆ ಬಂತು 19 ಸಾವಿರ ಅಡಿ ಎತ್ತರ ಹಾರುತ್ತಿದ್ದ ವಿಮಾನ, ತಪ್ಪಿತು ಭಾರೀ ಅಪಘಾತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏರ್ ಇಂಡಿಯಾ ಹಾಗೂ ನೇಪಾಳ ಏರ್‌ಲೈನ್ಸ್ ಆಗಸದಲ್ಲಿ ಡಿಕ್ಕಿಯಾಗುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ನವದೆಹಲಿಯಿಂದ 19 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಏರ್ ಇಂಡಿಯಾ ವಿಮಾನ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಮುನ್ನ ಹಠಾತ್ 15 ಸಾವಿರ ಅಡಿ ಕೆಳಗೆ ಬಂದಿದೆ.

ಕೌಲಾಂಪುರ್‌ನಿಂದ ಕಠ್ಮಂಡುವಿಗೆ ಬರುತ್ತಿದ್ದ ನೇಪಾಳ ಏರ್‌ಲೈನ್ಸ್ ವಿಮಾನಕ್ಕೆ ಬಹಳ ಸಮೀಪಕ್ಕೆ ಬಂದಿದ್ದು, ನೇಪಾಳ ಏರ್‌ಲೈನ್ಸ್ ಪೈಟಲ್‌ಗಳು ತಮ್ಮ ವಿಮಾನವನ್ನು 7 ಸಾವಿರ ಅಡಿಗಳಿಗೆ ಇಳಿಸಿ ಅಪಘಾತ ತಪ್ಪಿಸಿದ್ದಾರೆ.

ಈ ಬಗ್ಗೆ ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ಡಿಜಿಸಿಎಗೆ ಪತ್ರ ಬರೆದು ತನಿಖೆಗೆ ಮನವಿ ಮಾಡಿದೆ. ಜತೆಗೆ ಕರ್ತವ್ಯದಲ್ಲಿ ನಿರ್ಲಕ್ಷ್ಯದ ಆರೋಪದ ಮೇಲೆ ಸಿಎಎಎನ್ ಏರ್ ಟ್ರಾಫಿಕ್ ಕಂಟ್ರೋಲ್ ವಿಭಾಗದ ಮೂವರು ಉದ್ಯೋಗಿಗಳನ್ನು ಅಮಾನತು ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!