ಹೊಸದಿಗಂತ ವರದಿ,ಶಿವಮೊಗ್ಗ :
ನಗರದಲ್ಲಿ ಮತ್ತೋರ್ವ ರೌಡಿಶೀಟರ್ ಒಬ್ಬನ ಕಾಲಿಗೆ ಗುಂಡು ಬಿದ್ದಿದೆ. ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭವಿತ್ ಎನ್ನುವ ಆರೋಪಿಯ ಕಾಲಿಗೆ ಪಿಎಸ್‌ಐ ಗುಂಡು ಹಾರಿಸಿದ್ದಾರೆ. ಸದ್ಯ ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೌಡಿ ಶೀಟರ್ ಭವಿತ್ ವಿರುದ್ದ ಕೊಲೆ ಪ್ರಕರಣ, ದರೋಡೆ, ಕೊಲೆ ಯತ್ನ ಪ್ರಕರಣಗಳು ಸೇರಿದಂತೆ ಒಟ್ಟು ಏಳು ಪ್ರಕರಣಗಳಿವೆ. ಈತನ ವಿರುದ್ಧ ರೌಡಿಶೀಟ್ ಕೂಡ ಓಪನ್ ಆಗಿತ್ತು. ಜಿಲ್ಲೆಯಿಂದ ಗಡಿಪಾರಾದ ಬಳಿಕ ಈತ, ಭಾನುವಾರ ಶಿವಮೊಗ್ಗಕ್ಕೆ ವಾಪಸ್ ಆಗಿದ್ದ. ಭಾನುವಾರ ರಾತ್ರಿಯೇ ಜಯನಗರ ಠಾಣೆ ವ್ಯಾಪ್ತಿಯಲ್ಲಿ ಕಿರಿಕ್ ಮಾಡಿ ಗಲಾಟೆ ಮಾಡಿದ್ದ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಮಿಥುನ್ ಕುಮಾರ್, ಭವಿತ್ ಭಾನುವಾರ ರಾತ್ರಿ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೊಂದರೆಕೊಟ್ಟಿದ್ದಷ್ಟೇ ಅಲ್ಲದೆ ಜನರನ್ನ ಅಡ್ಡಗಟ್ಟಿ ಕೊಲೆ ಮಾಡಲು ಮುಂದಾಗಿದ್ದ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸೋಮವಾರ ಜಯನಗರ ಠಾಣೆ ಪಿಎಸ್‌ಐ ಸುನಿಲ್ ಆರೋಪಿಯನ್ನು ಬಂಧಿಸಲು ಹೋದ ಸಂದರ್ಭದಲ್ಲಿ ಅವರ ಮೇಲೆಯು ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಯ ಕ್ರಮವಾಗಿ ಪೊಲೀಸ್ ಅಧಿಕಾರಿ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಜೀವನಕ್ಕೆ ಶಾಂತಿ ಭಂಗ ತಂದ ಈತನನ್ನ ಹಿಡಿಯಲು ಪಿಎಸ್‌ಐ ಸುನಿಲ್ ತೆರಳಿದ್ದರು. ಈ ವೇಳೆ ಪೊಲೀಸ್ ತಂಡದ ಮೇಲೆ ಹಲ್ಲೆ ಮಾಡಿದ್ದಾನೆ. ಹೀಗಾಗಿ ಭವಿತ್ ಕಾಲಿಗೆ ಗುಂಡೇಟು ನೀಡಿದ್ದಾರೆ.