ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 70 ರನ್‌ಗಳಿಂದ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದೆ. ಅಭಿಮಾನಿಗಳು ಭರ್ಜರಿ ಸಂಭ್ರಮಪಟ್ಟಿದ್ದಾರೆ.
ಟೀಮ್ ಇಂಡಿಯಾ ಮಾಡಿದ ಮೋಡಿ ಎಲ್ಲರ ಮನಸ್ಸು ಗೆದ್ದಿದೆ. ಕೊನೆಯ ಹಂತದಲ್ಲಿ ನಡೆದ ಹಣಾಹಣಿ ಎಲ್ಲರಲ್ಲೂ ರೋಚಕತೆಯನ್ನು ಸೃಷ್ಟಿಸಿತ್ತು.
ಭಾರತದ ಈ ಗೆಲುವುವನ್ನು ಸ್ಟೇಡಿಯಂನಲ್ಲಿ ಮಾತ್ರವಲ್ಲದೆ ಹೊರಗೆ ಕೂಡ ಅಭಿಮಾನಿಗಳು ಸಂಭ್ರಮಿಸಿದ್ದರು. ಇಂತಹದೇ ಒಂದು ಗೆಲುವಿನ ಸಂಭ್ರಮಿಸಿದ ಕ್ಷಣವನ್ನು ಎಕ್ಸ್ನಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು Swiggyಯಲ್ಲಿ 240 ಪ್ಯಾಕ್ ಅಗರಬತ್ತಿಗಳನ್ನು ಆರ್ಡರ್ ಮಾಡುವ ಮೂಲಕ ಭಾರತ ತಂಡ ಗೆಲುವಿನ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.ಈ ಪೋಸ್ಟ್ ಈಗ ಸಾಕಷ್ಟು ವೈರಲ್ ಆಗಿದೆ.
ಈ ಬಗ್ಗೆ ಸ್ವತಃ ಇನ್‌ಸ್ಟಂಟ್ ಡೆಲಿವರಿ ಪ್ಲಾಟ್‌ಫಾರ್ಮ್ ಹೊಂದಿರುವ Swiggy ಎಕ್ಸ್ (ಹಿಂದೆ ಟ್ವಿಟರ್) ಹಾಗೂ ಇನ್ಸ್ಟ್ಗ್ರಾಮ್ನಲ್ಲಿ ಹಂಚಿಕೊಂಡಿದೆ. ಆಲೂಗಡ್ಡೆ ಮೇಲೆ ಅಗರಬತ್ತಿಯನ್ನು ಇಟ್ಟು ಉರಿಸಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ನಲ್ಲಿ ಡಜನ್ಗಟ್ಟಲೆ ಅಗರಬತ್ತಿಯನ್ನು ಉರಿಸಲಾಗಿದೆ. ಫೋಟೋದಲ್ಲಿ ಆಲೂಗಡ್ಡೆ ಮೇಲೆ ಅಗರಬತ್ತಿಯನ್ನು ಇಟ್ಟು ಉರಿಸಿರುವುದನ್ನು ಫೋಕಸ್ ಮಾಡಿ, ಟಿವಿಯಲ್ಲಿ ಪಂದ್ಯ ನಡೆಯುತ್ತಿರುವುದನ್ನು ಬ್ಲರ್ ಮಾಡಿ ತೋರಿಸಲಾಗಿದೆ.
ಮುಂಬೈನ ಥಾಣೆಯಲ್ಲಿರುವ ವ್ಯಕ್ತಿಯೊಬ್ಬರು 240 ಅಗರಬತ್ತಿ ಪ್ಯಾಕ್ಗಳನ್ನು Swiggyಯಲ್ಲಿ ಆರ್ಡರ್ ಮಾಡಿದ್ದಾರೆ. ಭಾರತದ ಕ್ರಿಕೆಟ್ ತಂಡ ಸೆಮಿಫೈನಲ್ನಲ್ಲಿ ಗೆಲ್ಲಬೇಕು ಎಂದು ಪ್ರಾರ್ಥಿಸಿಕೊಂಡಿದ್ದಾರೆ. ಆ ಪ್ರಕಾರ ಗೆಲುವಿನ ಸಂಭ್ರಮಕ್ಕೆ 240 ಅಗರಬತ್ತಿ ಪ್ಯಾಕ್ಗಳನ್ನು Swiggyಯಲ್ಲಿ ಆರ್ಡರ್ ಮಾಡಿ ಹಚ್ಚಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಧನ್ಯವಾದ ಹೇಳಿದ್ದಾರೆ.