ಹೇಗಿದೆ ನನ್ನ ಮ್ಯಾಜಿಕ್… ಮಕ್ಕಳ ಜೊತೆ ಆಟವಾಡಿ ಖುಷಿಪಟ್ಟ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿಯವರಿಗೆ ಮಕ್ಕಳ ಅಂದರೆ ಅಚ್ಚುಮೆಚ್ಚು.ಮಕ್ಕಳನ್ನು ಕಂಡಲ್ಲೆಲ್ಲ ಅವರೊಂದಿಗೆ ತಾವು ಚಿಕ್ಕ ಮುಕ್ಕಳಾಗಿ ಮೋಜು ಮಾಡುತ್ತಾರೆ.

ಹಾಗೆಯೇ ಇಬ್ಬರು ಮಕ್ಕಳ ಜತೆ ಮೋದಿ ಆಡುತ್ತಿರುವ ವಿಡಿಯೋವನ್ನು ಭಾರತೀಯ ಜನತಾ ಪಕ್ಷದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಮೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಅಖಿಲ ಭಾರತ ಶಿಕ್ಷಣ ಸಮಾಗಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಕ್ಕಳನ್ನು ಭೇಟಿ ಮಾಡಿದ್ದರು. ಮಕ್ಕಳೊಂದಿಗಿನ ಚಿತ್ರಗಳನ್ನು ಹಂಚಿಕೊಂಡಿದ್ದು ಅದರಲ್ಲಿ ಮುಗ್ಧ ಮಕ್ಕಳೊಂದಿಗೆ ಕಳೆದ ಅದ್ಭುತ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ. ಅವರ ಶಕ್ತಿ ಮತ್ತು ಉತ್ಸಾಹವು ಮನಸ್ಸಲ್ಲಿ ಉತ್ಸಾಹವನ್ನು ತುಂಬುತ್ತದೆ ಎಂದು ಬರೆದಿದ್ದಾರೆ.

https://twitter.com/BJP4India/status/1725007834402938916?ref_src=twsrc%5Etfw%7Ctwcamp%5Etweetembed%7Ctwterm%5E1725007834402938916%7Ctwgr%5Ec94a0306b085362fff94df3d3e1d4c28e2bd5005%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fundefined%3Fmode%3Dpwaaction%3Dclicklaunch%3Dtrue

ಒಬ್ಬ ಹುಡುಗಿ ಮತ್ತು ಅವಳ ಕಿರಿಯ ಸಹೋದರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದಿದ್ದಾರೆ. ಈ ಮಕ್ಕಳು ತಮ್ಮ ಪೋಷಕರೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಬಂದಿದ್ದರು. ಮೊದಮೊದಲು ಮಕ್ಕಳಿಗೆ ತುಂಬಾ ಪ್ರೀತಿ, ಆಶೀರ್ವಾದ ನೀಡಿದ ಮೋದಿ. ನಂತರ ಅವರೊಂದಿಗೆ ಆಟವಾಡಲು ಆರಂಭಿಸಿದರು.

1 ರೂಪಾಯಿ ನಾಣ್ಯ ಹಿಡಿದು ಹಣೆ ಮೇಲೆ ಅಂಟಿಸಿ ಆ ಮೂಲಕ ಮಕ್ಕಳ ಜೊತೆ ಆಟವಾಡಿದರು. ಅನೇಕ ಜನರು ತಮ್ಮ ಬಾಲ್ಯದಲ್ಲಿ 1 ರೂಪಾಯಿ ನಾಣ್ಯದೊಂದಿಗೆ ಈ ಆಟವನ್ನು ಆಡುತ್ತಿದ್ದರು. ಈ ಮೂಲಕ ಮಕ್ಕಳ ಜೊತೆಗೆ ಅಮೂಲ್ಯ ಸಮಯವನ್ನು ಕಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!