ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಚಿತ್ರ ಬಿಡುಗಡೆಯಾಗಿ ಒಂದು ತಿಂಗಳಾದರೂ ಇಡೀ ವಿಶ್ವದಲ್ಲಿ ಜನರು ಪ್ರೀತಿ ನೀಡುತ್ತಿದ್ದಾರೆ. ಎಲ್ಲೆಡೆ ಸಿನಿಮಾದ ನೋಡಿ ಮೆಚ್ಚುಗೆಗಳ ಮಾತನ್ನು ಹೇಳುತ್ತಿದ್ದಾರೆ.
ಇತ್ತೀಚೆಗೆ ಆದಿಯೋಗಿ ಸದ್ಗುರ ಅವರ ಇಶಾ ಫೌಂಡೇಷನ್ನಲ್ಲಿ ಕಾಂತಾರ ಸಿನಿಮಾ ಪ್ರದರ್ಶನವಾಗಿತ್ತು. ಇದೀಗ ಗುರುದೇವ್ ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ ಕಾಂತಾರ ಸಿನಿಮಾ ಪ್ರದರ್ಶನವಾಗಿದೆ.
ಬೆಂಗಳೂರಿನಲ್ಲಿರುವ ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ ಕಾಂತಾರ ಸಿನಿಮಾ ಪ್ರದರ್ಶನವಾಗಿದ್ದು, ಸ್ವತಃ ರವಿಶಂಕರ್ ಗುರೂಜಿ ಅವರು ಬಂದು ಸಿನಿಮಾ ನೋಡಿದ್ದಾರೆ. ಈ ವೇಳೆ ಅವರ ಅಪಾರ ಸಂಖ್ಯೆಯ ಶಿಷ್ಯರು ಚಿತ್ರ ವೀಕ್ಷಣೆ ಮಾಡಿದ್ದಾರೆ. ಪ್ರದರ್ಶನದ ವೇಳೆ ಸುಮಾರು 500ಕ್ಕೂ ಅಧಿಕ ಮಂದಿ ಇದ್ದರು.
ಕಾಂತಾರ ಎಂಬ ದಂತಕಥೆಯನ್ನು ಮನರಂಜನೆಯ ಮೂಲಕ ಸಿನಿಮಾದಲ್ಲಿ ಹೇಳಲಾಗಿದೆ. ಇದು ಕರ್ನಾಟಕಕ್ಕೆ ಹೆಮ್ಮೆ ತರುವಂತಹದ್ದು. ಕನ್ನಡ ಹಿರಿಮೆಯನ್ನು ಕಾಂತಾರ ಸಿನಿಮಾ ಚಿತ್ರಿಸಿದೆ ಎಂದು ಸಿನಿಮಾ ನೋಡಿ ರವಿಶಂಕರ್ ಗುರೂಜಿ ಹೇಳಿದರು.