300 ವರ್ಷಗಳ ಬಳಿಕ ಅಪರೂಪದ ಗಣೇಶ ಚತುರ್ಥಿ: ಮುಟ್ಟಿದ್ದೆಲ್ಲಾ ಶುಭದ ಸೂಚಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಆಗಸ್ಟ್ 31ರಂದು ಗಣೇಶ ಚತುರ್ಥಿಯ ವಿಶೇಷ ದಿನ. ಈ ದಿನ ಪ್ರತಿ ಮನೆಯಲ್ಲೂ ಗಣಪತಿಯನ್ನು ಪೂಜಿಸಲಾಗುತ್ತದೆ. ಈ ಗಣಪತಿ ಉತ್ಸವಗಳು ಕೇವಲ 10 ದಿನಗಳ ಕಾಲ ನಡೆಯಲಿದೆ. ಅನಂತ ಚತುರ್ಥಿಯಂದು ವಿಘ್ನೇಶ್ವರನು ಗಂಗೆಯಲ್ಲಿ ಲೀನವಾಗುತ್ತಾನೆ. ಇಂತಹ ಪುಣ್ಯ ಸಮಯದಲ್ಲಿ ಕೆಲವು ಯೋಗಗಳು ಸಹ ರೂಪುಗೊಳ್ಳಲಿವೆ. ಈ ಹತ್ತು ದಿನಗಳ ಗಣೇಶ ಹಬ್ಬದಲ್ಲಿ ಪ್ರಮುಖ ಗ್ರಹಗಳಾದ ಸೂರ್ಯ, ಬುಧ, ಗುರು ಮತ್ತು ಶನಿಗಳು ತಮ್ಮದೇ ಆದ ರಾಶಿಗಳಲ್ಲಿ ಚಲಿಸುತ್ತವೆ. 300 ವರ್ಷಗಳ ನಂತರ ಇದು ಮೊದಲ ಬಾರಿಗೆ ಸಂಭವಿಸಿದೆ.

ಈ ದಿನ ಯಾವುದೇ ಕೆಲಸವನ್ನು ಪ್ರಾರಂಭಿಸಲು ಮತ್ತು ಶಾಪಿಂಗ್ ಮಾಡಲು ಮಂಗಳಕರವಾಗಿದೆ. ಗಣೇಶೋತ್ಸವವು ಆಗಸ್ಟ್ 31 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 9 ರವರೆಗೆ ನಡೆಯಲಿದೆ. ಈ 10 ದಿನಗಳು ಖರೀದಿ ಮತ್ತು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಬಹಳ ಮಂಗಳಕರವಾಗಿದೆ. 300 ವರ್ಷಗಳ ನಂತರ ಬಂದ ಈ ಸಮಯದಲ್ಲಿ ಹೊಸ ಮನೆ ಖರೀದಿ, ಆಭರಣ, ಕಾರಿನಂತಹ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದು ಅಥವಾ ಕಾಯ್ದಿರಿಸುವುದು ತುಂಬಾ ಒಳ್ಳೆಯದು ಎನ್ನಲಾಗಿದೆ. ದೇಶದ ಹಲವು ಭಾಗಗಳಲ್ಲಿ ಗಣೇಶ ಚತುರ್ಥಿಯನ್ನು ಅಬುಜ ಮುಹೂರ್ತ ಎಂದು ಪರಿಗಣಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!