ಕಾಳಿಮಾತೆಯ ಆಕ್ಷೇಪಾರ್ಹ ಪೋಸ್ಟ್:‌ ಕ್ಷಮೆಯಾಚಿಸಿದ ಉಕ್ರೇನ್‌, ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತೇವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಕ್ರೇನ್‌ನ ವಿದೇಶಾಂಗ ಸಚಿವೆ ಎಮಿನ್ ಝಪರೋವಾ ಭಾರತ ಕುರಿತು ಕ್ಷಮೆಯಾಚಿಸಿದ್ದಾರೆ. ಸ್ಪೋಟದ ಹೊಗೆಯಲ್ಲಿ ಕಾಳಿಮಾತೆಯನ್ನು ಹೋಲುವ ಚಿತ್ರ ರಚಿಸಿ ಪೋಸ್ಟ್‌ ಮಾಡಿದ್ದರ ಕುರಿತಾಗಿ ಕ್ಷಮೆ ಕೇಳಿದ್ದಾರೆ.

ʻಕಾಳಿ ದೇವಿಯನ್ನು ವಿಕೃತ ರೀತಿಯಲ್ಲಿ ಚಿತ್ರಿಸಿರುವುದನ್ನು ಉಕ್ರೇನ್ ವಿಷಾದಿಸುತ್ತಿದೆ ಮತ್ತು ಯುರೋಪಿಯನ್ ದೇಶವು ಭಾರತೀಯ ವಿಶಿಷ್ಟ ಸಂಸ್ಕೃತಿಯನ್ನು ಗೌರವಿಸುತ್ತದೆ ಹಾಗೂ ಭಾರತದಿಂದ ಬೆಂಬಲವನ್ನು ಹೆಚ್ಚು ಪ್ರಶಂಸಿಸುತ್ತದೆʼ ಎಂದು ಎಮಿನ್ ಝಪರೋವಾ ಟ್ವೀಟ್‌ ಮಾಡಿದ್ದಾರೆ.

ಏಪ್ರಿಲ್ 30 ರಂದು, ಉಕ್ರೇನ್‌ನ ರಕ್ಷಣಾ ಸಚಿವಾಲಯವು “ವರ್ಕ್ ಆಫ್ ಆರ್ಟ್” ಎಂಬ ಶೀರ್ಷಿಕೆಯೊಂದಿಗೆ ಕಾಳಿಮಾತೆಯ ಆಕ್ಷೇಪಾರ್ಯ ಟ್ವೀಟ್ ಮಾಡಿದೆ. ಉಕ್ರೇನಿಯನ್ ಕಲಾವಿದ ಮ್ಯಾಕ್ಸಿಮ್ ಪಲೆಂಕೊ ಅವರ ಸುಧಾರಿತ ಚಿತ್ರದೊಂದಿಗೆ ಸ್ಫೋಟದ ಚಿತ್ರವನ್ನು ಹಂಚಿಕೊಂಡಿದೆ. ಚಿತ್ರದಲ್ಲಿ, ‘ಫ್ಲೈಯಿಂಗ್ ಸ್ಕರ್ಟ್’ ಭಂಗಿಯಲ್ಲಿ ಹಿಂದೂ ದೇವತೆ ‘ಕಾಳಿ’ಯನ್ನು ಹೋಲುವ ಪ್ರಸಿದ್ಧ ಅಮೇರಿಕನ್ ನಟಿ ಮರ್ಲಿನ್ ಮನ್ರೋ ಅವರನ್ನು ನೆನಪಿಸುವ ಚಿತ್ರವನ್ನು ಬಿಡಿಸಿದ್ದರು.

ಚಿತ್ರವನ್ನು ಪೋಸ್ಟ್ ಮಾಡಿದ ನಂತರ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆ ರಕ್ಷಣಾ ಸಚಿವಾಲಯ ಪೋಸ್ಟ್‌ ಡಿಲೀಟ್‌ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!