ಕಿವಿಯಲ್ಲಿ 7.12 ಇಂಚು ಉದ್ದ ಕೂದಲನ್ನು ಬೆಳೆಸಿ ಗಿನ್ನಿಸ್ ದಾಖಲೆ ಬರೆದ ನಿವೃತ್ತ ಶಿಕ್ಷಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಜನರು ವಿನೂತವಾಗಿ ಗಿನ್ನಿಸ್ ದಾಖಲೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಕೈ ಉಗುರುಗಳನ್ನು ಉದ್ದವಾಗಿ ಬೆಳೆಸುವುದು, ಉದ್ದದ ನಾಲಿಗೆ, ಕೂದಲು, ಎತ್ತರ ಹೀಗೆ ಅನೇಕ ಬಗೆಯ ದಾಖಲೆ ಬರೆದಿದ್ದಾರೆ. ಅದೇ ರೀತಿ ಇದೀಗ ಶಿಕ್ಷಕರೋರ್ವರು ಕಿವಿಯಲ್ಲಿನ ಕೂದಲನ್ನು ಉದ್ದವಾಗಿ ಬೆಳೆಸುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ.

ತಮಿಳುನಾಡಿನ ಆಂಟೋನಿ ವಿಕ್ಟರ್ ಎಂಬೆಸರಿನ ಭಾರತದ ನಿವೃತ್ತ ಶಿಕ್ಷಕರೊಬ್ಬರು ಕಿವಿಯಲ್ಲಿ ಸುಮಾರು 18.1 ಸೆಂಟಿಮೀಟರ್ ಅಂದರೆ 7.12 ಇಂಚು ಅಳತೆ ಉದ್ದದ ಕೂದಲನ್ನು ಬೆಳೆಸಿದ್ದು, ಈ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ.

ಈ ಹಿಂದೆ 2007 ರಿಂದ ವಿಶ್ವದ ಅತಿ ಉದ್ದದ ಕಿವಿ ಕೂದಲು ಹೊಂದಿರುವ ವಿಶ್ವದಾಖಲೆಯನ್ನು ಹೊಂದಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಇನ್ ಸ್ಟಾಗ್ರಾಮ್ ನಲ್ಲಿ ವಿಚಾರವನ್ನು ವಿಕ್ಟರ್ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!