ಹೊಸದಿಗಂತ ಡಿಜಿಟಲ್ ಡೆಸ್ಕ್:
ರೀಲ್ಸ್‌ಗಾಗಿ ಮಚ್ಚು ಹಿಡಿದ ತಪ್ಪಿಗೆ ಜೈಲು ಸೇರಿ ಹೊರಬಂದ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರ ಗೆಳೆತನದಲ್ಲಿ ಬಿರುಕು ಮೂಡಿದೆ.
ಕಳೆದ 10 ವರ್ಷಗಳಿಂದ ಇವರಿಬ್ಬರ ಮಧ್ಯೆ ಸ್ನೇಹ ಸಂಬಂಧ ಚೆನ್ನಾಗಿತ್ತು. ಆದರೆ ಆ ರೀಲ್ಸ್ ಮಾಡಿದ ಮೇಲೆ ಇವರಿಬ್ಬರ ಸ್ನೇಹಕ್ಕೆ ತುಕ್ಕು ಹಿಡಿದಿದೆ. ಇಬ್ಬರು ಈಗ ಬೇರೆ, ಬೇರೆಯಾಗಿದ್ದು, ವಿನಯ್ ಗೌಡ ಅವರ ಮೇಲೆ ರಜತ್ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.
ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದ ಕೆಲವು ದಿನಗಳವರೆಗೂ ರಜತ್ ಹಾಗೂ ವಿನಯ್ ಸ್ನೇಹದಲ್ಲಿ ಸರಿಯಾಗಿಯೇ ಇತ್ತು. ಆದರೆ ವಿನಯ್ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ರೀಲ್ಸ್ ಘಟನೆಗೆ ಕ್ಷಮಾಪಣೆ ಕೇಳಿದ್ದರು. ತಮ್ಮ ಅಭಿಮಾನಿಗಳಿಗೆ ಈ ರೀತಿ ಯಾರು ಮಾಡಬೇಡಿ ಅನ್ನೋ ಮನವಿ ಮಾಡಿದ್ದರು.
ಅಭಿಮಾನಿಗಳು ಪ್ರೀತಿಯಿಂದ ವಿನಯ್ ಅವರಿಗೆ ನೀವು ರಜತ್ ಜೊತೆ ರೀಲ್ಸ್ ಮಾಡಬೇಡಿ ಎಂದು ಮಾಡಿದ ಕಾಮೆಂಟ್‌ಗಳನ್ನ ವಿನಯ್ ಕೂಡ ಲೈಕ್ ಮಾಡಿದ್ದರು. ಇದೇ ರಜತ್ ಅವರಿಗೆ ವಿನಯ್ ಮೇಲೆ ಬೇಸರ ಆಗುವಂತೆ ಮಾಡಿದೆ. ಇದಾದ ಮೇಲೆ ಇಬ್ಬರು ಅಂತರ ಕಾಯ್ದುಕೊಂಡಿದ್ದಾರೆ.
ವಿನಯ್ ನನಗಿಂತ 10 ವರ್ಷ ದೊಡ್ಡವನು. ಅವನಿಗೆ ಗೊತ್ತಿದೆ ಎಲ್ಲಿ ಏನು ಮಾತಾಡಬೇಕು ಅಂತ ಚೆನ್ನಾಗಿ ಗೊತ್ತಿದೆ. ಅವನು ನಮ್ಮ ಅಣ್ಣ ತಾನೇ ಮಾತಾಡಲಿ ಬಿಡಿ. ರೀಲ್ಸ್ ಮಾಡಬೇಕು ಅನ್ನೋ ಅವಶ್ಯಕತೆ ಇಲ್ಲ. ಇಲ್ಲಿ ಯಾರು ವಿನಯ್ ಗೌಡ ಜೊತೆಗೆ ರೀಲ್ಸ್ ಮಾಡಬೇಕು ಅಂತ ಕಾಯುತ್ತ ಕುತ್ತಿಲ್ಲ. ಅವನ ಪಾಡಿಗೆ ನೆಮ್ಮದಿಯಾಗಿ ಇರಲಿ ಎಂದರು.
ಸೋಷಿಯಲ್ ಮೀಡಿಯಾದಲ್ಲಿ ರಜತ್ ಜೊತೆಗೀನ ಸಹವಾಸ ಬಿಟ್ಟು ಬಿಡಿ ಅನ್ನೋ ಕಾಮೆಂಟ್ಸ್ಗೆ ವಿನಯ್ ಗೌಡ ಅವರು ಲೈಕ್ ಮಾಡಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತಾಡಿದ ರಜತ್, ಅದು ತುಂಬಾ ಬೇಜಾರ್ ಆಗಿದ್ದು. ವಿನಯ್ ಗೌಡ ಕಾಮೆಂಟ್ಸ್ಗೆ ಲೈಕ್ ಮಾಡಬಾರದಿತ್ತು. ನಂದು ವಿನಿದು 10 ವರ್ಷದ ಗೆಳತನ. ವಿನಯ್ ಏನ್ ಅಂತ ನನಗೆ ಗೊತ್ತು, ನಾ ಏನ್ ಅಂತ ವಿನಯ್ಗೆ ಗೊತ್ತು. ಯಾರೋ 3ನೇ ವ್ಯಕ್ತಿ ಬಂದು ಹೀಗೆ ಕಾಮೆಂಟ್ಸ್ ಮಾಡಿದಾಗ ಬಿಟ್ಟು ಬಿಡಬೇಕಾಗಿತ್ತು. ಆದ್ರೆ ಫ್ರೆಂಡ್ಶಿಪ್ ಅನ್ನು ಬಿಟ್ಟು ಕೊಡಬಾರದಿತ್ತು. ನನಗೆ ಇದು ವ್ಯಯಕ್ತಿಕವಾಗಿ ಬೇಸರ ಆಗಿದೆ. ಆದ್ರೆ ನಾನು ಫೋನ್ ಮಾಡಿ ಹೀಗೆ ಮಾಡಬಾರದಾಗಿತ್ತು ಅಂತ ಹೇಳಿದ ಕೂಡಲೇ ನನ್ನ ಜೊತೆಗೆ ಮಾತು ಬಿಟ್ಟ. ನನ್ನ ಹಾಗೂ ವಿನಯ್ ಗೌಡ ಮಧ್ಯೆ ಮನಸ್ತಾಪ ಆಗಿದೆ. ನಾನು ಯಾವತ್ತು ಅವನನ್ನು ಬಿಟ್ಟು ಕೊಟ್ಟಿಲ್ಲ. ಬಿಟ್ಟು ಕೊಡೋದು ಇಲ್ಲ. ಆದ್ರೆ ಅವನಿಗೆ ಅರ್ಥ ಆಗಬೇಕಿತ್ತು. ವಿನಯ್ ತುಂಬಾ ಒಳ್ಳೆಯವನು ಎಂದಿದ್ದಾರೆ.