ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಆಟಗಾರನ ಹೊಸ ಹೆಜ್ಜೆ ಅಭಿಮಾನಿಗಳಿಗೆ ಅಚ್ಚರಿ ನೀಡಿದೆ.
ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಹೊಸ ಪ್ರೊಡಕ್ಷನ್ ಹೌಸ್‌ಗೆ ‘‘UR MARV‘‘ ಎಂದು ಹೆಸರಿಟ್ಟಿದ್ದು ಬ್ರಿಟನ್ ಮೂಲದ ‘ಎಕ್ಸ್ ಮೆನ್’, ‘ಕಿಂಗ್ಸ್‌ಮನ್‘ ಖ್ಯಾತಿಯ ಹಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಮ್ಯಾಥ್ಯೂ ವುಗಾನ್ ಜೊತೆ ಕೈ ಜೋಡಿಸಿದ್ದಾರೆ.
ಈ ವಿಷಯವನ್ನು ಸ್ವತಃ ರೊನಾಲ್ಡೊ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಅವರಿಗೆ ಫುಟ್ಬಾಲ್ ಇಷ್ಟ, ನನಗೆ ಸಿನಿಮಾ ಇಷ್ಟ, ಕಥೆ ಹೇಳೋಕೆ ನಾವು ರೆಡಿ, ನೋಡುವುದಕ್ಕೆ ನೀವು ರೆಡಿ ಆಗಿ. ಹಾಲಿವುಡ್ ಸ್ಟಾರ್‌ಗಳ ಜೊತೆ ನಿಮ್ಮ ಮುಂದೆ’ ಎಂದು ರೊನಾಲ್ಡೊ ವಿಡಿಯೊ ಹಂಚಿಕೊಂಡಿದ್ದಾರೆ.