10 ರೂಪಾಯಿಯಲ್ಲಿ 1 ರೂಪಾಯಿ ಕಮ್ಮಿ ಇದ್ದರೂ ಅದನ್ನು 10 ರೂಪಾಯಿ ಅನ್ನೋಕಾಗಲ್ಲ!

ಬೀಚ್‌ನಲ್ಲಿ ಅವಳು ಮಾರ್ನಿಂಗ್ ವಾಕ್ ಮಾಡ್ತಾ ಇದ್ಲು. ಅದಾಗ ತಾನೆ ಮೂಡಿಬರುತ್ತಿದ್ದ ಸೂರ್ಯ, ತಣ್ಣನೆ ಗಾಳಿ, ಅಲೆ ಶಬ್ದ… ಎಲ್ಲವೂ ಅದ್ಭುತವಾಗಿತ್ತು.

ವಾಕ್ ಮಾಡುವಾಗ ಅಲ್ಲೇ ಪುಟ್ಟ ಹುಡುಗಿಯೊಬ್ಬಳು ದಡದ ಮರಳಿಂದ ಏನನ್ನೋ ಹೆಕ್ಕಿ ಸಮುದ್ರದೊಳಗೆ ಹಾಕ್ತಾ ಇದ್ಲು. ಸುಮಾರು ಹೊತ್ತು ಈ ಹುಡುಗಿಯನ್ನೇ ಆಕೆ ನೋಡ್ತಾ ನಿಂತಿದ್ಲು.

ಕುತೂಹಲದಿಂದ ಪುಟಾಣಿ ಬಳಿ ಹೋಗಿ, ಏನ್ ಎಸಿತಾ ಇದೆಯಾ? ಎಂದು ಕೇಳಿದಳು. ಅದಕ್ಕೆ ಪುಟ್ಟಿ ನಕ್ಷತ್ರ ಮೀನು ರಾತ್ರಿ ದಡದ ಮೇಲೆ ಬಂದುಬಿಟ್ಟಿದೆ. ಬಿಸಿಲಿಗೆ ಇವೆಲ್ಲಾ ಸತ್ತು ಹೋಗುತ್ತವೆ. ಅದಕ್ಕೆ ಅದನ್ನು ಬದುಕಿಸ್ತಾ ಇದಿನಿ ಎಂದು ಹೇಳಿದಳು.

ಅದಕ್ಕೆ ಯುವತಿ ಪಕ್ಕನೆ ನಕ್ಕು, ಮುಗ್ಧೆ ಪುಟಾಣಿ ಎಂದುಕೊಳ್ತಾ, ಅಲ್ಲಾ, ನೀನು ಬಿಸಿಲು ಹೆಚ್ಚಾಗೋದ್ರ ಒಳಗೆ ಎಷ್ಟು ನಕ್ಷತ್ರ ಮೀನು ನೀರಿಗೆ ಹಾಕ್ತ್ಯ? ಈ ಥರದ್ ಮೀನುಗಳು ಈ ಬೀಚ್‌ನಲ್ಲಿ ಎಷ್ಟು ರಾಶಿ ಇದೆ ಗೊತ್ತಾ? ಎಂದಳು.

ಅದಕ್ಕೆ ಪುಟ್ಟಿ ಹೇಳಿದ್ಲು, ನಾನು ಎಲ್ಲ ಮೀನುಗಳನ್ನು ಹೆಕ್ಕೋಕೆ ಆಗಲ್ಲ, ಆದರೆ ಈ ಮೀನಿನ ಜೀವ ಉಳಿತಲ್ಲ, ಇದಕ್ಕೆ ನನ್ನಿಂದ ಸಹಾಯ ಆಯ್ತಲ್ಲಾ ಎನ್ನುತ್ತಾ ಬಗ್ಗಿ ಮೀನು ಹೆಕ್ಕಿ ಸಮುದ್ರಕ್ಕೆ ಹಾಕುತ್ತಾ ಮುಂದೆ ಹೋದಳು…

ಜನರಿಗೆ ಸಹಾಯ ಮಾಡಿ, ಸಮಾಜಕ್ಕೆ ಸಹಾಯ ಮಾಡಿ, ನಾನು ಒಬ್ಬ ಮಾಡೋದ್ರಿಂದ ಏನು ಮಹಾ ಬದಲಾವಣೆ ಸಾಧ್ಯ ಎನ್ನುವ ಭಾವನೆ ಬಿಟ್ಟುಬಿಡಿ. 10 ರೂಪಾಯಿಯಲ್ಲಿ ಒಂದು ರೂಪಾಯಿ ಕಮ್ಮಿ ಆದರೂ ಅದನ್ನು ಹತ್ತು ರೂಪಾಯಿ ಅಂತ ಕರಿಯೋಕೆ ಸಾಧ್ಯ ಇಲ್ಲ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!