ಯುವಕನ ಹೊಟ್ಟೆಯೊಳಗಿತ್ತು ಏಳೂವರೆ ಇಂಚು ಉದ್ದದ ಬಾಟಲ್:ವೈದ್ಯರ ಶಸ್ತ್ರಚಿಕಿತ್ಸೆ ಯಶಸ್ವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುವಕನ ಹೊಟ್ಟೆಯೊಳಗಿದ್ದ ಡಿಯೋಡರೆಂಟ್ ಬಾಟಲ್ನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿರುವ ಘಟನೆ ಕೋಲ್ಕತಾದಲ್ಲಿ ನಡೆದಿದೆ.
ಇಲ್ಲಿನ ಬರ್ದ್ವಾನ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ 27 ವರ್ಷದ ಯುವಕ ಬಂದಿದ್ದಾನೆ. ಈ ವೇಳೆ ವಿಪರೀತ ಹೊಟ್ಟೆ ನೋವಿದೆ ಎಂದು ತೀವ್ರನಿಗಾ ಘಟಕಕ್ಕೆ ಸೇರಿದ್ದ. ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದಾರೆ. ಎಕ್ಸ್ರೇ ವರದಿ ತರಿಸಿ ನೋಡಿದಾಗ ಹೊಟ್ಟೆಯೊಳಗೆ ಬಾಟಲ್ ಇರುವುದು ಪತ್ತೆಯಾಗಿದೆ.

20 ದಿನಗಳ ಹಿಂದೆ ಯುವಕನ ಹೊಟ್ಟೆಯೊಳಗೆ ಬಾಟಲ್ ಸೇರಿಕೊಂಡಿದೆ. ಇದರಿಂದಾಗಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೊಟ್ಟೆಯೊಳಗಿದ್ದ ಬಾಟಲ್ ಏಳೂವರೆ ಇಂಚು ಉದ್ದ ಇತ್ತು. ಸುಮಾರು ಎರಡೂವರೆ ಗಂಟೆ ಶಸ್ತ್ರ ಚಿಕಿತ್ಸೆ ನಡೆಸಿ ಬಾಟಲನ್ನು ಹೊರತೆಗೆಯಲಾಗಿದೆ.

ಯುವಕನ ಅನ್ನನಾಳಕ್ಕೆ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಾಗಿದೆ. ಭವಿಷ್ಯದಲ್ಲಿ ಸಮಸ್ಯೆ ಬಂದು ಮತ್ತೆ ಶಸ್ತ್ರ ಚಿಕಿತ್ಸೆ ನಡೆಸಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಹೊಟ್ಟೆಯೊಳಗೆ ಬಾಟಲ್ ಹೇಗೆ ಹೋಯಿತು ಎಂಬುವುದರ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಗುದದ್ವಾರದ ಮೂಲಕ ಬಾಟಲ್ ಹೊಟ್ಟೆಯೊಳಗೆ ಹೋಯಿತು ಎಂದು ಯುವಕ ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!