ಲಕ್ನೋ ವಿರುದ್ಧ ಪಂದ್ಯಕ್ಕೂ ಮುನ್ನ ಮುಂಬೈಗೆ ಶಾಕ್: ನಾಯಿಯಿಂದ ಕಚ್ಚಿಸಿಕೊಂಡ ತೆಂಡೂಲ್ಕರ್‌ ಪುತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುತ್ತಿರುವ ಮುಂಬೈ ಬೌಲರ್ ಅರ್ಜುನ್ ತೆಂಡುಲ್ಕರ್ ಗೆ ಇದೀಗ ನಾಯಿ ಕಚ್ಚಿರುವ ವಿಚಾರ ಬಹಿರಂಗಗೊಂಡಿದೆ.

ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಅರ್ಜುನ್ ತೆಂಡುಲ್ಕರ್, ಲಖನೌ ಜೈಂಟ್ಸ್‌ ಎದುರಿನ ಪಂದ್ಯದ ಮುನ್ನ ದಿನ ಲಖನೌ ಆಟಗಾರ ಯಧುವೀರ್ ಸಿಂಗ್ ಬಳಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ತಮಗೆ ನಾಯಿ ಕಚ್ಚಿದ್ದಾಗಿ ಹೇಳುವ ವಿಡಿಯೋ ತುಣುಕನ್ನು ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಅರ್ಜುನ್ ತೆಂಡುಲ್ಕರ್ ಹಾಗೂ ಯಧುವೀರ್ ಸಿಂಗ್ ಮುಖಾಮುಖಿಯಾದಾಗ, ಯಧುವೀರ್ ಸಿಂಗ್, ಅರ್ಜುನ್‌ಗೆ ಹೇಗಿದ್ದೀಯಾ ಎಂದು ಕೇಳಿದಾಗ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ತಾವು ಬೌಲಿಂಗ್ ಮಾಡುವ ಎಡಗೈ ತೋರಿಸಿ, ನಾಯಿ ಕಚ್ಚಿದ್ದಾಗಿ ಹೇಳುತ್ತಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಸಾಕಷ್ಟು ವರ್ಷಗಳ ಕಾಯುವಿಕೆಯ ಬಳಿಕ ಅರ್ಜುನ್ ತೆಂಡುಲ್ಕರ್, ಕೊನೆಗೂ ಈ ಆವೃತ್ತಿಯಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅರ್ಜುನ್ ತೆಂಡುಲ್ಕರ್, 5 ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಪರ 4 ಪಂದ್ಯಗಳನ್ನಾಡಿ ಮೂರು ವಿಕೆಟ್ ಕಬಳಿಸಿದ್ದಾರೆ. ಇನ್ನು ಒಮ್ಮೆ ಮಾತ್ರ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಅರ್ಜುನ್ ತೆಂಡುಲ್ಕರ್ 13 ರನ್ ಬಾರಿಸಿದ್ದಾರೆ.

ಇತ್ತ ಪ್ಲೇ-ಆಫ್‌ ಹಂತ ಪ್ರವೇಶಕ್ಕೆ ಪೈಪೋಟಿ ತೀವ್ರಗೊಂಡಿದ್ದು, ಆರಂಭಿಕ ಹಿನ್ನಡೆಯ ಹೊರತಾಗಿಯೂ ಮುಂಬೈ ಇಂಡಿಯನ್ಸ್‌ ಮತ್ತೊಮ್ಮೆ ಅಗ್ರ-4ರಲ್ಲಿ ಸ್ಥಾನ ಪಡೆದು ಪ್ಲೇ-ಆಫ್‌ಗೇರಲು ಎದುರು ನೋಡುತ್ತಿದೆ. ಲಖನೌ ಸೂಪರ್‌ಜೈಂಟ್ಸ್‌ ಕೂಡ ಪ್ಲೇ-ಆಫ್‌ ರೇಸ್‌ನಲ್ಲಿದ್ದು, ಉಭಯ ತಂಡಗಳು ಮಂಗಳವಾರ ಪರಸ್ಪರ ಎದುರಾಗಲಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!