Friday, June 2, 2023

Latest Posts

ಈ ತಿಂಗಳ ಅಂತ್ಯದಲ್ಲಿ ನೂತನ ಸಂಸತ್ ಭವನ ಲೋಕಾರ್ಪಣೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೂತನ ಸಂಸತ್ ಭವನವನ್ನು (New Parliament Building) ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸುವ ಸಾಧ್ಯತೆಯಿದೆ.

ಈ ತಿಂಗಳ ಅಂತ್ಯದ ವೇಳೆಗೆ ಅಂದರೆ ಮೇ 28ರಂದು ನೂತನ ಸಂಸತ್ ಭವನ (New Parliament Building) ಔಪಚಾರಿಕವಾಗಿ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ.

ಈ ಕುರಿತು ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲವಾದರೂ, ಮೇ ಅಂತ್ಯದಲ್ಲಿ ಉದ್ಘಾಟನೆ ನಡೆಯಲಿದೆ ಎಂದು ಮೂಲಗಳು ಹೇಳುತ್ತವೆ.

ಸುಮಾರು 970 ಕೋಟಿ ಅಂದಾಜು ವೆಚ್ಚದಲ್ಲಿ ಸಂಸತ್ ಭವನ ನಿರ್ಮಿಸಲಾಗಿದೆ.ತ್ರಿಕೋನ ಆಕಾರದಲ್ಲಿರುವ ಈ ಕಟ್ಟಡದ ನಿರ್ಮಾಣವು ಜನವರಿ 15, 2021 ರಂದು ಪ್ರಾರಂಭವಾಯಿತು. ಇದು ಆಗಸ್ಟ್ 2022 ರೊಳಗೆ ಪೂರ್ಣಗೊಳ್ಳಬೇಕಿತ್ತು. 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಹೊಸ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ 1,224 ಸಂಸದರು ಇರಬಹುದಾಗಿದೆ. ಹೊಸ ಸಂಸತ್ತಿನ ಕಟ್ಟಡವು ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ, ಇವುಗಳಿಗೆ ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಹೆಸರಿಸಲಾಗಿದೆ.

ಈ ಕಟ್ಟಡವು ಸಂಸದರು, ವಿಐಪಿಗಳು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶದ್ವಾರಗಳನ್ನು ಹೊಂದಿರುತ್ತದೆ. ಈ ಕಟ್ಟಡದ ಮತ್ತೊಂದು ವಿಶೇಷವೆಂದರೆ ಸಂವಿಧಾನ ಭವನ, ದೇಶದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ನಿರ್ಮಿಸಲಾಗಿದೆ. ಭಾರತದ ಮೂಲ ಸಂವಿಧಾನದ ಪ್ರತಿಯನ್ನು ಸಭಾಂಗಣದಲ್ಲಿ ಇಡಲಾಗಿದೆ.ಇದು ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು ಮತ್ತು ಊಟದ ಕೋಣೆಗಳನ್ನು ಸಹ ಹೊಂದಿದೆ.

ಹೊಸ ಸಂಸತ್ ಕಟ್ಟಡವು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸುಭಾಸ್ ಚಂದ್ರ ಬೋಸ್ ಮತ್ತು ದೇಶದ ಇತರ ಪ್ರಧಾನ ಮಂತ್ರಿಗಳ ಭಾವಚಿತ್ರಗಳನ್ನು ಹೊಂದಿರುತ್ತದೆ. ಕೋನಾರ್ಕ್‌ನ ಸೂರ್ಯ ದೇವಾಲಯದ ಚಕ್ರದ ಮಾದರಿಯೊಂದಿಗೆ ಬಹುಮುಖಿ ಕೌಟಿಲ್ಯನ ಭಾವಚಿತ್ರವನ್ನು ಕಟ್ಟಡದಲ್ಲಿ ಸ್ಥಾಪಿಸಲಾಗಿದೆ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!