ಹಮಾಸ್ ಗೆ ಸಾಥ್ ಕೊಟ್ಟ ಸಿರಿಯಾಗೆ ಶಾಕ್: 2 ವಿಮಾನ ನಿಲ್ದಾಣ ಮೇಲೆ ದಾಳಿ ನಡೆಸಿದ ಇಸ್ರೇಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗಾಜಾ ಪಟ್ಟಿಯಲ್ಲಿನ (Gaza Strip) ಹಮಾಸ್ ಬಂಡುಕೋರರ (Hamas Attack on Israel) ಕದನಕ್ಕೆ ಇಳಿದ ಇಸ್ರೇಲ್, ನೆರೆಯ ಸಿರಿಯಾ ದೇಶದ ಎರಡು ವಿಮಾನ ನಿಲ್ದಾಣಗಳ ಮೇಲೆ ದಾಳಿ ಮಾಡಿದೆ.

ಸಿರಿಯಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾದ ದಮಾಸ್‌ಕಸ್ ಹಾಗೂ ಆ್ಯಲೆಪೋ ಮೇಲೆ ಏರ್‌ಸ್ಟ್ರೈಕ್ ಮಾಡಿದೆ ಎಂದು ಸಿರಿಯಾದ ಸ್ಛಳೀಯ ಮಾಧ್ಯಮ ಸನಾ ಹಾಗೂ ಇಸ್ರೇಲ್ ಮಾಧ್ಯಮಗಳು ವರದಿ ಮಾಡಿದೆ.

ಸಿರಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ಬೆನ್ನಲ್ಲೇ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದೆ. ದಮಾಸ್‌ಕಸ್ ಹಾಗೂ ಆ್ಯಲೆಪೊ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದೆ.

ಸಿರಿಯಾ ವಿದೇಶಾಂಗ ಸಚಿವರನ್ನು ಹೊತ್ತು ದಮಾಸ್‌ಕಸ್ ವಿಮಾನ ನಿಲ್ದಾಣದತ್ತ ಆಗಮಿಸುತ್ತಿದ್ದ ಏರ್‌ಬಸ್ ಎ340 ವಿಮಾನಕ್ಕೆ ತುರ್ತು ಸಂದೇಶ ಕಳುಹಿಸಿ ಬೇರೆ ನಿಲ್ದಾಣದಲ್ಲಿ ಲ್ಯಾಂಡ್ ಆಗುವಂತೆ ಮಾಡಲಾಗಿದೆ.

ಹಮಾಸ್ ಉಗ್ರರ ಬೆಂಬಲಿಸಿ ಸಿರಿಯಾ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಲೆಬೆನಾನ್ ಕೂಡ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಇಸ್ರೇಲ್ ಹೆಲಿಕಾಪ್ಟರ್ ಹೊಡೆದುರುಳಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸಿರಿಯಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯನ್ನು ಧ್ವಂಸಗೊಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!