Friday, December 8, 2023

Latest Posts

ಕಾಂಗ್ರೆಸ್‌ಗೆ ಮುಖಭಂಗ: ಗಂಗಾಜಲದ ಜಿಎಸ್‌ಟಿ ತೆರಿಗೆ ಇಲ್ಲ ಇಂದ ಕೇಂದ್ರ ಸರಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಗಂಗಾಜಲದ ಮೇಲಿನ ತೆರಿಗೆ ಕುರಿತು ಕೆಲ ದಿನಗಳಿಂದ ಸೃಷ್ಟಿಯಾಗಿದ್ದ ಗೊಂದಲಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಗಂಗಾಜಲದ ಮೇಲೆ ಮೋದಿ ಸರ್ಕಾರ ಶೇಕಡಾ 19 ರಷ್ಟು ಜಿಎಸ್‌ಟಿ ತೆರಿಗೆ ವಿಧಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಕುರಿತು ಕೇಂದ್ರ ಸರ್ಕಾರದ ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟಾಕ್ಸಸ್ ಅಂಡ್ ಕಸ್ಟಮ್ಸ್ ಸ್ಪಷ್ಟನೆ ನೀಡಿದೆ. 2017ರ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿತ್ತು. ಇಷ್ಟೇ ಅಲ್ಲ ಪವಿತ್ರ ಗಂಗಾಜಲಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಈ ನಿಯಮದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇದೀಗ ಗಂಭೀರ ಆರೋಪ ಮಾಡಿದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.

ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದರು. ಮೋದಿ ಉತ್ತರಖಂಡ ಪ್ರವಾಸದ ದಿನವೇ ಖರ್ಗೆ ಟ್ವಿಟರ್ ಮೂಲಕ ಕೇಂದ್ರದ ವಿರುದ್ಧ ನಕಲಿ ರಾಮ ಭಕ್ತ ಆರೋಪ ಮಾಡಿದ್ದರು. ಹಿಂದುಗಳ ಬದುಕಿನಲ್ಲಿ ಗಂಗಾಜಲಕ್ಕೆ ವಿಶೇಷ ಪ್ರಾತಿನಿಧ್ಯವಿದೆ. ಜನನದಿದಂ ಮರಣದವರೆಗೆ ಸಾಮಾನ್ಯ ಭಾರತೀಯನಿಗೆ ಮೋಕ್ಷ ಒದಗಿಸುವ ಗಂಗಾ ಮಾತೆ ಮಹತ್ವ ಹೆಚ್ಚು. ನಿಮ್ಮ ಸರ್ಕಾರ ಶೇಕಡಾ 10 ರಷ್ಟು ಜಿಎಸ್‌ಟಿ ತೆರಿಗೆಯನ್ನು ಗಂಗಾಜಲದ ಮೇಲೆ ವಿಧಿಸಿದೆ. ತಮ್ಮ ಮನೆಯಲ್ಲಿ ಗಂಗಾಜಲ ತರಿಸುವವರಿಗೆ ಇದರ ಹೊರೆಯನ್ನು ಮೋದಿ ಸರ್ಕಾರ ಯೋಚಿಸಿಲ್ಲ. ಬಿಜೆಪಿ ಸರ್ಕಾರದ ಲೂಟಿ ಹಾಗೂ ಬೂಟಾಟಿಕೆಯ ಪರಮಾವಧಿ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದರು.

ಇದೀಗ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿದ್ದಂತೆ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ(CBIC) ಸ್ಪಷ್ಟನೆ ನೀಡಿದೆ.

ಪವಿತ್ರ ಗಂಗಾಜಲವನ್ನು ದೇಶದ ಮನೆ ಮನೆಯಲ್ಲಿ ಪೂಜೆಗೆ ಬಳಸಲಾಗುತ್ತದೆ. ಪೂಜಾ ಸಾಮಾಗ್ರಿಗಳನ್ನು ಜಿಎಸ್‌ಟಿ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಪೂಜಾ ಸಾಮಾಗ್ರಿ ಮೇಲೆ ಜಿಎಸ್‌ಟಿ ತೆರಿಗೆಯನ್ನು ಜಿಎಸ್‌ಟಿ ಕೌನ್ಸಿಲ್‌ನ 14 ಹಾಗೂ 15ನೇ ಸಭೆಯಲ್ಲಿ ಚರ್ಚಿಸಲಾಗಿದೆ. ಮೇ 18, 19, 2017ರಂದು ಹಾಗೂ ಜೂನ್ 2, 2017ರಂದು ನಡೆದ ಸಭೆಯಲ್ಲಿ ಪೂಜಾ ಸಾಮಾಗ್ರಿ ಹಾಗೂ ಜಿಎಸ್‌ಟಿ ತೆರಿಗೆ ಕುರಿತು ಚರ್ಚೆ ನಡೆಸಲಾಗಿದೆ. ಬಳಿಕ ಪೂಜಾ ಸಾಮಾಗ್ರಿಗಳನ್ನು ಜಿಎಸ್‌ಟಿ ತೆರಿಗೆಯಿಂದ ಪೂಜಾ ಸಾಮಾಗ್ರಿಯನ್ನು ಹೊರಗಿಡಲು ನಿರ್ಧರಿಸಿ ನಿರ್ಣಯ ಕೈಗೊಳ್ಳಲಾಗಿದೆ. ಜಿಎಸ್‌ಟಿ ಜಾರಿಯಾದಗಿನಿಂದ ಪೂಜಾ ಸಾಮಾಗ್ರಿಗಳನ್ನು ತೆರಿಗೆಯಿಂದ ವಿನಾಯಿತಿಗೊಳಿಸಲಾಗಿದೆ ಎಂದು CBIC ಸ್ರಷ್ಟನೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!