ಬಳಕೆದಾರರಿಗೆ ಶಾಕ್: ಫೆ. 1 ರಿಂದ ಈ ಫೋನ್​ಗಳಲ್ಲಿ WhatsApp ಬಂದ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಿಂಗಳಲ್ಲಿ 2 ಬಿಲಿಯನ್​ಗೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸ್​ಆ್ಯಪ್ (WhatsApp) ನಾನಾ ವಿಶೇಷ ಫೀಚರ್ಸ್ ಮೂಲಕ ಜನರಿಗೆ ಹತ್ತಿರವಾಗಿದೆ.
ಭಾರತದಲ್ಲೆ 500 ಮಿಲಿಯನ್ ಅಕೌಂಟ್ ಹೊಂದಿರುವ ವಾಟ್ಸ್​ಆ್ಯಪ್ ಇದೀಗ ಶಾಕಿಂಗ್ ಸುದ್ದಿಯೊಂದು ನೀಡಿದೆ.

ಅದೇನೆಂದರೆ ಫೆಬ್ರವರಿ 1 ರಿಂದ ಕೆಲ ಐಫೋನ್ (iPhone) ಮತ್ತು ಆಂಡ್ರಾಯ್ಡ್ (Android) ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ತನ್ನ ಕೆಲಸವನ್ನು ನಿಲ್ಲಿಸಲಿದೆ. ಇದಕ್ಕೆ ಕಾರಣ ವಾಟ್ಸ್​ಆ್ಯಪ್ ಹೊಸ ಹೊಸ ಫೀಚರ್ ರಿಲೀಸ್ ಮಾಡುತ್ತಿರುವುದು.

ವಾಟ್ಸ್​ಆ್ಯಪ್ ನೂತನ ಅಪ್ಡೇಟ್​ಗಳನ್ನು ಬಿಡುಗಡೆ ಮಾಡುತ್ತಿರುವುದು ಕೆಲ ಬಳಕೆದಾರರಿಗೆ ತೊಂದರೆ ಉಂಟು ಮಾಡುತ್ತಿದೆ. ಹೊಸ ಫೀಚರ್​ಗಳು ಹಳೆಯ ಸ್ಮಾರ್ಟ್​ಫೋನ್​ಗಳಲ್ಲಿ ಕೆಲಸ ಮಾಡುವುದಿಲ್ಲ. ಇದೇ ಕಾರಣದಿಂದಾಗಿ ಕೆಲ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಬಂದ್ ಆಗಲಿದೆ. ಫೆಬ್ರವರಿ 1 ರಿಂದ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸಲು ಆಂಡ್ರಾಯ್ಡ್​ನ 4.0.3 ಅಥವಾ ಅದಕ್ಕಿಂತ ಮುಂದಿನ ಆವೃತ್ತಿ ಬೇಕಾಗಿದೆ. ಹಾಗೆಯೆ ಐಫೋನ್​ನಲ್ಲಿ ಐಒಎಸ್ 12.0 ನಂತರದ ವರ್ಷನ್​ನಲ್ಲಿ ಮಾತ್ರ ಕೆಲಸ ಮಾಡುತ್ತದೆ.

ಮುಂದಿನ ದಿನಗಳಲ್ಲಿ​ ಫೀಚರ್​ಗಳು ಬಹಳ ಗುಣಮಟ್ಟದ್ದಾಗಿರುತ್ತದೆ. ಈ ಫೀಚರ್ಸ್ ಮತ್ತು ಮೊಬೈಲ್​ನ ಕಾರ್ಯಚಟುವಟಿಕೆಗಳೊಂದಿಗೆ ಸಮಸ್ಯೆ ಉಂಟಾಗುವುದರಿಂದ ಇನ್ಮುಂದೆ ವಾಟ್ಸ್​ಆ್ಯಪ್​​ ಫೀಚರ್ಸ್ ಅನ್ನು ಬೆಂಬಲ ನೀಡದ ಸ್ಮಾರ್ಟ್​​ಫೋನ್​ಗಳಿಂದ ಹಂತ ಹಂತವಾಗಿ ಅಪ್ಲಿಕೇಶನ್ ಅನ್ನು ತೆಗೆದು ಹಾಕಲಾಗುವುದು ಎಂದು ಕಂಪನಿ ಹೇಳಿದೆ. ವಾಟ್ಸ್​ಆ್ಯಪ್ ಐಓಎಸ್​​ 12 ಮತ್ತು ಇನ್ನೂ ಹೆಚ್ಚಿನ ಡಿವೈಸ್​ಗಳೊಂದಿಗೆ ಹೊಂದಿಕೊಳ್ಳುತ್ತದೆ. ಆದರೆ ಆ್ಯಪಲ್​ನ ಆಪರೇಟಿಂಗ್​ ಸಿಸ್ಟಮ್​ನ ಇತ್ತೀಚಿನ ವರ್ಷನ್​ಗೆ ಅಪ್ಡೇಟ್​ ಮಾಡಲು ವಾಟ್ಸ್​ಆ್ಯಪ್​​ ಬಳಕೆದಾರರಿಗೆ ಸಲಹೆ ನೀಡುತ್ತಿದೆ.

ಸದ್ಯ ಹಳೆಯ ಡಿವೈಸ್‌ಗಳನ್ನು ಬಳಸುತ್ತಿರುವ ಬಳಕೆದಾರರಿಗೆ ವಾಟ್ಸ್​ಆ್ಯಪ್​​ ಈಗಾಗಲೇ ಹಲವು ಸಂದೇಶಗಳನ್ನು ಕಳುಹಿಸಿದೆ. ಎಚ್ಚರಿಕೆ ಸಂದೇಶಗಳನ್ನು ನೀಡುವ ಮೂಲಕ ಕೂಡಲೇ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಗ್ರೇಡ್‌ ಮಾಡಿಕೊಳ್ಳುವಂತೆ ಹೇಳಿದೆ. ಈ ರೀತಿಯ ಡಿವೈಸ್‌ಗಳಲ್ಲಿ ದುರುದ್ದೇಶಪೂರಿತ ಚಟುವಟಿಕೆಗಳಿಂದ ರಕ್ಷಿಸಲು ಅಗತ್ಯವಾದ ಸುರಕ್ಷತೆಗಾಗಿ ವಾಟ್ಸ್​ಆ್ಯಪ್​​ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!