ಅತ್ಯಾಚಾರ ಪ್ರಕರಣ: ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿದ ಗುಜರಾತ್‌ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2013 ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುರನ್ನು ದೋಷಿ ಎಂದು ನಿನ್ನೆ (ಜನವರಿ 30) ತೀರ್ಪು ನೀಡಿದ್ದ ಗುಜರಾತ್‌ ಕೋರ್ಟ್‌ ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಸುಮಾರು 10 ವರ್ಷಗಳ ಹಿಂದೆ ಅಹಮದಾಬಾದ್‌ನ ಮೊಟೆರಾದಲ್ಲಿರುವ ತನ್ನ ಆಶ್ರಮದಲ್ಲಿ ಅಸಾರಾಮ್ ಬಾಪು ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಸೂರತ್ ಮೂಲದ ಮಹಿಳೆಯೊಬ್ಬರು ದೂರು ನೀಡಿದ್ದರು.

ಈ ಪ್ರಕರಣದಲ್ಲಿ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿ ಕೂಡ ಆರೋಪಿಯಾಗಿದ್ದರು. ಅಲ್ಲದೆ, ಅಸಾರಾಂ ಬಾಪು ಪತ್ನಿ ಲಕ್ಷ್ಮೀ, ಮಗಳು ಭಾರತಿ ಮತ್ತು ನಾಲ್ವರು ಮಹಿಳಾ ಅನುಯಾಯಿಗಳಾದ ಧ್ರುವಬೆನ್, ನಿರ್ಮಲಾ, ಜಸ್ಸಿ ಮತ್ತು ಮೀರಾ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.

ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ (Lack of Evidence) ಅಸಾರಾಂ ಬಾಪು (Asaram Bapu) ಪತ್ನಿ (Wife) ಸೇರಿದಂತೆ ಇತರ ಆರು ಆರೋಪಿಗಳನ್ನು (Accused) ನ್ಯಾಯಾಲಯ (Court) ಜನವರಿ 30 ರಂದು ಖುಲಾಸೆಗೊಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!