ಉಡುಪಿಯಲ್ಲೊಂದು ಶಾಕಿಂಗ್ ಘಟನೆ: ಗಸ್ತಿನಲ್ಲಿದ್ದ ಪೊಲೀಸರ ಮೇಲೆ ತಂಡದಿಂದ ದಾಳಿ

ಹೊಸದಿಗಂತ ಮಂಗಳೂರು:

ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ತಂಡವೊಂದು ದಾಳಿ ನಡೆಸಿದ ಆಘಾತಕಾರಿ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆ ಎಂಬಲ್ಲಿ ನಡೆದಿದೆ.

ಮಲ್ಪೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುಷ್ಮಾ, ಗೃಹರಕ್ಷಕ ಸಿಬ್ಬಂದಿ ಜೊತೆ ಇಲಾಖಾ ವಾಹನದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಸಂದರ್ಭ ಹೂಡೆ ಎಂಬಲ್ಲಿ ಈ ಘಟನೆ ನಡೆದಿದೆ.

ಪೊಲೀಸರು ತೊಟ್ಟಂ, ಗುಜ್ಜರಬೆಟ್ಟು, ಕದಿಕೆ, ಬದನಿಡಿಯೂರು ಪ್ರದೇಶಗಳಲ್ಲಿ ಸಂಚರಿಸಿ ರಾತ್ರಿ 2 ಗಂಟೆ ಸುಮಾರಿಗೆ ಹೂಡೆ ತಲುಪಿದ್ದರು. ಈ ವೇಳೆ ಹೂಡೆ ಶಾಲೆಯ ಬಳಿ ತಂಡವೊಂದು ಜೋರಾಗಿ ಕೂಗಾಡುತ್ತಿದ್ದು, ಪೊಲೀಸ್ ಜೀಪನ್ನು ಕಂಡ ತಕ್ಷಣ ಇವರ ಪೈಕಿ 2-3 ಜನ ಓಡಿ ಪರಾರಿಯಾಗಿದ್ದಾರೆ.

ಉಳಿದ ಮಂದಿ ಇಲಾಖಾ ವಾಹನದ ಬಳಿ ಬಂದು ಅಧಿಕಾರಿಗಳನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಲ್ಲದೆ, ಒಬ್ಬಾತ ವಾಹನವನ್ನು ತಡೆದು ಅದರ ಗಾಜಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿಗಳು ಅಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವ ಜೊತೆಗೆ ಇಲಾಖಾ ವಾಹನಕ್ಕೆ ಹಾನಿಗೊಳಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!