Thursday, March 30, 2023

Latest Posts

VIRAL POST | ಯುವತಿಯೊಂದಿಗೆ “ಹಾರ್ಟ್‌ಬ್ರೇಕ್ ಇನ್ಶುರೆನ್ಸ್ ಫಂಡ್” ಒಪ್ಪಂದ ಮಾಡಿಕೊಂಡ ಬುದ್ಧಿವಂತ ಪ್ರೇಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಪ್ರೀತಿಯಲ್ಲಿ ಮೋಸ ಹೋದವರು ದುಖವನ್ನು ತೋಡಿಕೊಳ್ಳುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಪ್ರೀತಿಸಿದವಳಿಂದ ಆಗಿದ್ದು ದ್ರೋಹ, ಆದರೆ 25,000 ಸಿಕ್ಕಿದ್ದು ಹೇಗೆ ಎಂದು ಸಾಮಾಜಿ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಟ್ವಿಟರ್ ಬಳಕೆದಾರರಾದ ಪ್ರತೀಕ್ ಆರ್ಯನ್, ತಾನು ತನ್ನ ಪ್ರೇಯಸಿಯೊಂದಿಗೆ ಪ್ರೀತಿಯಲ್ಲಿ ಬಿದ್ದಾಗ ಒಂದು ಒಪ್ಪಂದ ಮಾಡಿಕೊಂಡಿದ್ದೆವು. ಅದೇನೆಂದರೆ ಪ್ರತಿ ತಿಂಗಳು ಇಬ್ಬರ ಜಂತೆ ಖಾತೆಯಲ್ಲಿ 500/-ರೂ ಪಾವತಿಸಬೇಕು ಮತ್ತು ಅದನ್ನು “ಹಾರ್ಟ್‌ಬ್ರೇಕ್ ಇನ್ಶುರೆನ್ಸ್ ಫಂಡ್” ಎಂದು ಕರೆಯಲಾಗುತ್ತದೆ. ಪ್ರೀತಿಯಲ್ಲಿ ಯಾರೇ ಮೋಸ ಹೋದರೂ ಅವರು ಆ ದುಡ್ಡನ್ನು ತೆಗೆದುಕೊಂಡು ಹೋಗಬಹುದು ಎಂದು ಒಪ್ಪಂದವಾಗಿತ್ತು. ಅದರಂತೆ ಆಕೆ ನನಗೆ ಮೋಸ ಮಾಡಿದಳು ಹಾಗಾಗಿ ನನಗೆ 25 ಸಾವಿರ ಸಿಕ್ಕಿದೆ ಎಂದು ಬರೆದುಕೊಂಡಿದ್ದಾನೆ.

ಇದೀಗ ಈ ಟ್ವೀಟ್ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವೈರಲ್ ಆಗಿದೆ. ಇದನ್ನು 2.98 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ನೆಟಿಜನ್‌ಗಳು “ಹಾರ್ಟ್‌ಬ್ರೇಕ್ ಇನ್ಶುರೆನ್ಸ್ ಫಂಡ್” ಕಲ್ಪನೆಯಿಂದ ಪ್ರಭಾವಿತರಾಗಿದ್ದಾರೆ ಮತ್ತು ಅದನ್ನು ತಾವೂ ಪ್ರಯತ್ನಿಸಲು ಬಯಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!