Thursday, March 23, 2023

Latest Posts

ಪಾಕ್ ಜನತೆಗೆ ಮತ್ತೆ ಒತ್ತಡ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಆರ್ಥಿಕ ಸಂಕಷ್ಟದಲ್ಲಿರುವ ಪಾಕ್ ಜನತೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಸರ್ಕಾರವು (Pakistan Government) ಇಂಧನ ಬೆಲೆ ಏರಿಕೆ ಮಾಡಿದೆ .

ಅಮೆರಿಕ ಡಾಲರ್ (US Dollar) ಎದುರು ಪಾಕಿಸ್ತಾನಿ ರೂಪಾಯಿ (PKR) ದುರ್ಬಲಗೊಂಡ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಹೊಸ ಬೆಲೆಗಳು ಗುರುವಾರ ಮಧ್ಯರಾತ್ರಿ 12 ಗಂಟೆಗೆ ಜಾರಿಗೆ ಬಂದಿದ್ದು ಮಾರ್ಚ್ 31ರ ವರೆಗೆ ಜಾರಿಯಲ್ಲಿರುತ್ತದೆ.

ಪಾಕಿಸ್ತಾನ ಸರ್ಕಾರವು ಪೆಟ್ರೋಲ್ ಬೆಲೆಯನ್ನು ಲೀಟರಿಗೆ 5ರೂ. ಹೆಚ್ಚಳ ಮಾಡಿದ್ದು ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ (Petrol) ಬೆಲೆಯು 272 ಪಾಕಿಸ್ತಾನ ರೂ.ಗಳಾಗಿದೆ. ಅಲ್ಲದೇ ಡೀಸೆಲ್ (Diesel) ಬೆಲೆಯನ್ನು ಲೀಟರಿಗೆ 13 ರೂ. ಹೆಚ್ಚಳ ಮಾಡಲಾಗಿದ್ದು ಈಗ 280 ರೂ. ಆಗಿದೆ.

ಫೆಬ್ರವರಿ 28ರಂದು ಪಾಕಿಸ್ತಾನ ಸರ್ಕಾರವು ಪೆಟ್ರೋಲ್ ಬೆಲೆಯನ್ನು ಪ್ರತೀ ಲೀಟರಿಗೆ 5 ಪಾಕಿಸ್ತಾನಿ ರುಪಾಯಿ ಕಡಿಮೆ ಮಾಡಿತ್ತು. ಹೀಗಾಗಿ ಪೆಟ್ರೋಲ್ ಬೆಲೆಯು ಲೀಟರ್‌ಗೆ 267 ರೂಗೆ ಇಳಿಕೆಯಾಗಿತ್ತು. ಇದೀಗ ಮತ್ತೆ ಪಾಕಿಸ್ತಾನ ಸರ್ಕಾರವು ಬೆಲೆ ಏರಿಕೆ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!