ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪಘಾತದಲ್ಲಿ ಗಾಯಗೊಂಡಿದ್ದ ತನ್ನ ಅಜ್ಜನನ್ನು ಆಂಬ್ಯುಲೆನ್ಸ್‌ಲ್ಲಿ ಕರೆದೊಯ್ಯುವುದನ್ನು ನೋಡುತ್ತಾ ನಿಂತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿದೆ!
ಹೌದು, ಸಕಲೇಶಪುರದ ಬಾಳೆಗದ್ದೆ ಗ್ರಾಮದ ಸಮೀಪ ಈ ದುರ್ಘಟನೆ ನಡೆದಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡಿದರೆ ಮೈ ಜುಂ ಎನಿಸುವಂತಿದೆ.
ಭವಿಷ್ (16) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕ. ಭವಿಷ್‌ನ ಅಜ್ಜ ಸಿದ್ದರಾಜು ಅವರಿಗೆ ಬೈಕ್ ಡಿಕ್ಕಿಯಾಗಿ, ಗಾಯಗೊಂಡಿದ್ದರು. ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ತಾತನಿದ್ದ ಆಂಬ್ಯುಲೆನ್ಸ್ ಹೋಗುವುದನ್ನು ನೋಡುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿದೆ. ಅಪಘಾತದ ಬಳಿಕ ಚಾಲಕ ಕಾರನ್ನು ನಿಲ್ಲಿಸದೇ ಅಲ್ಲಿಂದ ತೆರಳಿದ್ದಾನೆ.



