ಬರೋಬ್ಬರಿ 150,000 ಜ್ಯೋರ್ತಿವರ್ಷ ದೂರದಲ್ಲಿ ಪತ್ತೆಯಾಗಿದೆ ಸೂರ್ಯನಿಗಿಂತ 200 ಪಟ್ಟು ದೊಡ್ಡ ನಕ್ಷತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೂಮಿಯಿಂದ 150,000 ಜ್ಯೋರ್ತಿವರ್ಷಗಳಷ್ಟು ದೂರವಿರುವ ಬೃಹತ್ ನಕ್ಷತ್ರವನ್ನು ಇತ್ತೀಚೆಗೆ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಆರ್136 ನಕ್ಷತ್ರ ಪುಂಜದಲ್ಲಿ ಆರ್ 136ಎ1 ಹೆಸರಿನ ದೊಡ್ಡ ನಕ್ಷತ್ರವನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಭೂಮಿಯಿಂದ 150,000 ಜ್ಯೋರ್ತಿವರ್ಷಗಳಷ್ಟು ದೂರದಲ್ಲಿರುವ ಮೆಗೆಲಾನಿಕ್ ಕ್ಲೌಡ್‌ನಲ್ಲಿರುವ ಟರಂಟುಲಾ ನೆಬ್ಯುಲಾದಲ್ಲಿರುವ ನಕ್ಷತ್ರ ಪುಂಜದಲ್ಲಿ ಖಗೋಳಶಾಸ್ತ್ರಜ್ಞರ ತಂಡವು ವ್ಯಾಪಕ ಸಂಶೋಧನೆ ನಡೆಸಿದ ಬಳಿಕ ಈ ನಕ್ಷತ್ರವನ್ನು ಪತ್ತೆ ಹಚ್ಚಿದೆ.

ನಕ್ಷತ್ರ ಪುಂಜವು ದೊಡ್ಡದ್ದಾಗಿದ್ದು, ಹಲವು ಅದ್ಭುತ ನಕ್ಷತ್ರಗಳನ್ನು ಒಳಗೊಂಡಿವೆ. ಚಿತ್ರಗಳನ್ನು ಬಳಸಿ ಖಗೋಳಶಾಸ್ತ್ರಜ್ಞರು ಆರ್‌136ಎ1 ಸೇರಿದಂತೆ ಕೆಲ ನಕ್ಷತ್ರಗಳನ್ನು ಲೆಕ್ಕ ಹಾಕಿದ್ದು, ಇವು ಸೂರ್ಯನಿಗಿಂತ 150-200 ಪಟ್ಟು ದೊಡ್ಡದಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!