ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಸ್ಟ್ ಕೆಲವೇ ಕ್ಷಣಗಳಲ್ಲಿ ಇಡೀ ದೇಶ 2024ಕ್ಕೆ ಗುಡ್‌ಬೈ ಹೇಳಿ, 2025ಕ್ಕೆ ಹಾಭರ್ಜರಿಯಾಗಿ ವೆಲ್‌ಕಮ್ ಮಾಡಲು ಸಜ್ಜಾಗಿದ್ದು, ಈ ಕ್ಷಣ ಪ್ರಧಾನಿ ಮೋದಿ ಅವರು ಕೂಡ ಸಂದೇಶದೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ .
ಪ್ರಧಾನಿ ನರೇಂದ್ರ ಮೋದಿ ಅವರು 2024ರ ವರ್ಷವನ್ನು ಪ್ರತಿಬಿಂಬಿಸಿದ ಮತ್ತು ದೇಶವು ಕಂಡ ಸಾಮೂಹಿಕ ಪ್ರಯತ್ನಗಳು ಮತ್ತು ಪರಿವರ್ತಕ ಫಲಿತಾಂಶಗಳನ್ನು ಶ್ಲಾಘಿಸಿದರು.
ಸಂದೇಶದೊಂದಿಗೆ ವೀಡಿಯೊವನ್ನು ಹಂಚಿಕೊಂಡ ಪಿಎಂ ಮೋದಿ, ಈ ವರ್ಷದಲ್ಲಿ ಭಾರತದ ಸಾಧನೆಗಳನ್ನು ಈ ವೀಡಿಯೊದಲ್ಲಿ ಅದ್ಭುತವಾಗಿ ಸಂಕ್ಷೇಪಿಸಲಾಗಿದೆ ಎಂದು ಹೇಳಿದರು. ಈ ವೀಡಿಯೊದಲ್ಲಿ ;ಪ್ರಗತಿ, ಏಕತೆ ಮತ್ತು ವಿಕಸಿತ ಭಾರತದತ್ತ ಹೆಜ್ಜೆಗಳ ವರ್ಷವನ್ನು ಗುರುತಿಸಿದ ಮರೆಯಲಾಗದ ಕ್ಷಣಗಳು!; ಎಂದು ಬರೆದಿದ್ದಾರೆ.
ಮುಂದಿನ ವರ್ಷವನ್ನು ಎದುರು ನೋಡುತ್ತಿರುವ ಪ್ರಧಾನಿ ಮೋದಿ, ‘ನಾವು 2025ರಲ್ಲಿ ಇನ್ನೂ ಹೆಚ್ಚು ಶ್ರಮಿಸಲು ಮತ್ತು ವಿಕಸಿತ ಭಾರತದ ನಮ್ಮ ಕನಸನ್ನು ನನಸಾಗಿಸಲು ನಿರ್ಧರಿಸಿದ್ದೇವೆ’ ಎಂದು ಬರೆದಿದ್ದಾರೆ.