ಕಡಲತೀರದಲ್ಲಿ ವಿಚಿತ್ರ ಪ್ರಾಣಿ ಪತ್ತೆ, ಪ್ರಪಂಚದ ಅತ್ಯಂತ ದುಬಾರಿ ಬೆಲೆಯ ಜೀವಿಯಂತೆ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಡಲತೀರಗಳಲ್ಲಿ ಚಿತ್ರ ವಿಚಿತ್ರ ಸಮುದ್ರ ಜೀವಿಗಳು ಕಾಣಸಿಗುತ್ತವೆ. ಇತ್ತೀಚೆಗಷ್ಟೇ ಬ್ರಿಟನ್‌ನ ವೇಲ್ಸ್‌ನ ಬೆನ್ನಾರ್ ಬೀಚ್‌ನಲ್ಲಿ ದೊರೆತ ವಿಚಿತ್ರ ಜೀವಿ ಥೇಟ್‌ ಏಲಿಯನ್ ಅನ್ನು ಹೋಲುವ ರೀತಿಯಿದೆ. ಈ ಫೋಟೋ ವೈರಲ್ ಆಗಿದ್ದು, ಈ ವಿಚಿತ್ರ ಜೀವಿಯನ್ನು ಶೆಲ್ ಲಾಂಗ್ಮೋರ್ ಎಂಬ ಮಹಿಳೆ ಕಂಡುಹಿಡಿದಿದ್ದಾರೆ. ಆ ಜೀವಿಯ ಹೆಸರು ತಿಳಿಯದ ಕಾರಣ ಅದರ ಫೋಟೋ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಕೆಲವು ತಜ್ಞರು ಈ ಪ್ರಾಣಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೂಸ್ ಬಾರ್ನಾಕಲ್ಸ್ ಅಥವಾ ಗೂಸೆನೆಕ್ ಬಾರ್ನಾಕಲ್ಸ್ ಎಂದು ಕರೆಯಲಾಗುತ್ತದೆ ಎಂದಿದ್ದಾರೆ. ಈ ಜೀವಿ ಕಾಣಸಿಗುದುವುದು ಬಲು ಅಪರೂಪ ಆದ ಅಷ್ಟೇ ರುಚಿಕರ ಎಂದು ಹೇಳಲಾಗುತ್ತದೆ. ಇದು ವಿಶ್ವದ ಅತ್ಯಂತ ದುಬಾರಿ ಸಮುದ್ರಾಹಾರಗಳಲ್ಲಿ ಒಂದಾಗಿದೆ. ಇವನ್ನು ಹೆಚ್ಚಾಗಿ ಸ್ಪೇನ್ ಮತ್ತು ಪೋರ್ಚುಗಲ್‌ನಲ್ಲಿ ತಿನ್ನಲಾಗುತ್ತದೆ ಎಂದು ತಿಳಿದುಬಂದಿದೆ.

ಇದರ ಬೆಲೆ ಬರೋಬ್ಬರಿ 28 ಸಾವಿರ ರೂಪಾಯಿ. ನೀರೊಳಗಿನ ಬಂಡೆಗಳು ಮತ್ತು ಸ್ಪೇನ್‌ನ ಕೋಸ್ಟಾಡ ಮೋರ್ಟೆಯಲ್ಲಿರುವ ಬಿರುಕುಗಳಲ್ಲಿ ಹೆಚ್ಚಾಗಿ ಇರುತ್ತವೆ ಎಂದು ಹೇಳಲಾಗುತ್ತದೆ. ತಜ್ಞ ಮೀನುಗಾರರು ತಮ್ಮ ಪ್ರಾಣ ಪಣಕ್ಕಿಟ್ಟು ಇವುಗಳನ್ನು ಹಿಡಿದು ತರುತ್ತಾರೆ ಹಾಗಾಗಿಯೇ ಇವುಗಳ ಬೆಲೆ ಹೆಚ್ಚಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!