ವಿಜಪುರದಲ್ಲಿ ನಡೆಯಿತು ಕಲ್ಲಿಗೆ ಜೋರಾಗಿ ತಲೆ ಜಜ್ಜಿ ಭಕ್ತಿ ಮೆರೆಯುವ ವಿಲಕ್ಷಣ ಜಾತ್ರೆ!

ಹೊಸದಿಗಂತ ವರದಿ, ವಿಜಯಪುರ:

ಓಡೋಡಿ ಬಂದು ಕಲ್ಲಿಗೆ ಜೋರಾಗಿ ತಲೆ ಜಜ್ಜಿ ದೇವರಿಗೆ ನಮಸ್ಕಾರ ಮಾಡಿ ಭಕ್ತಿ ಮೆರೆಯುವ ವಿಲಕ್ಷಣ ಜಾತ್ರೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ನಡೆದಿದೆ.

ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆ ವೇಳೆ ಈ ವಿಲಕ್ಷಣ ಆಚರಣೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

ಓಡೋಡಿ ಬಂದು ದೊಡ್ಡ ಕಲ್ಲಿಗೆ ಭಕ್ತರು ತಲೆ ಜಜ್ಜಿಕೊಳ್ಳುತ್ತಾರೆ. ಒಟ್ಟು ಮೂರು ಸಲ ತಲೆ ಜಜ್ಜಿ ಭಕ್ತರು ನಮಸ್ಕಾರ ಮಾಡುತ್ತಾರೆ.

ನೂರಾರು ಜನರಿಂದ ನಡೆಯುವ ಈ ವಿಶಿಷ್ಟ ಆಚರಣೆಯಲ್ಲಿ, ಕಲ್ಲಿಗೆ ಎಷ್ಟೇ ಜೋರಾಗಿ ತಲೆ ಜಜ್ಜಿಕೊಂಡರು ಯಾರಿಗೂ ಗಾಯವಾಗುವುದಿಲ್ಲ.

ಸೋಮೇಶ್ವರ ದೇವರ ಶಕ್ತಿಯಿಂದ ಯಾವುದೇ ಅಪಾಯ ಆಗುವುದಿಲ್ಲ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಕಾರ್ತೀಕ ಮಾಸದ ಬಳಿಕ ಈ ವಿಶಿಷ್ಟ ಆಚರಣೆಯ ಜಾತ್ರೆ ನಡೆಯುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!