ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಹಣದ ಮೂಲ ಬೆನ್ನತ್ತಿದ್ದ ಪೊಲೀಸರು!

ಹೊಸದಿಗಂತ ವರದಿ, ಮಂಗಳೂರು:

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದೆ. ಮಂಗಳೂರು ಪೊಲೀಸರ ತಂಡ ಆತನ ಹಣದ ಮೂಲದ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ.

ಶಾರಿಕ್‌ಗೆ ಹಣ ಒದಗಿಸುತ್ತಿದ್ದವರ ಹಿಂದೆ ಬಿದ್ದಿರುವ ಪೊಲೀಸರು ಈ ನಿಟ್ಟಿನಲ್ಲಿ ಹಲವರನ್ನು ವಶಕ್ಕೆ ಪಡೆಯುತ್ತಿದ್ದಾರೆ. ಮೈಸೂರಿನಲ್ಲೂ ಕೆಲವರನ್ನು ವಿಚಾರಣೆಗೊಳಪಡಿಸಲಾಗಿದೆ ಎನ್ನಲಾಗಿದೆ. ಈ ನಡುವೆ ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ಹಸ್ತಾಂತರಿಸುವ ಅಂತಿಮ ಸಿದ್ಧತೆ ನಡೆದಿದೆ. ಶೀಘ್ರವೇ ಪ್ರಕರಣ ಮಂಗಳೂರು ನ್ಯಾಯಾಲಯದ ಮೂಲಕ ಎನ್‌ಐಎಗೆ ತನಿಖೆ ಹಸ್ತಾಂತರವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!