ಮುಂಡಗೋಡ ತಾಲೂಕಿನ ಮಜ್ಜಿಗೇರಿಯ ವಿದ್ಯಾರ್ಥಿನಿಗೆ ಕೋವಿಡ್ ಪಾಸಿಟಿವ್

ಹೊಸ ದಿಗಂತ ವರದಿ ಮುಂಡಗೋಡ:

ತಾಲೂಕಿನ ಮಜ್ಜಿಗೇರಿಯ ವಿದ್ಯಾರ್ಥಿನಿಗೆ ಕೋವಿಡ್ -19 ಶನಿವಾರ ದೃಢವಾಗಿದೆ ಎಂದು ತಾಲೂಕು ಆಸ್ಪತ್ರೆಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಮಜ್ಜಿಗೇರಿ ಗ್ರಾಮದ ಯುವತಿ ಹಾನಗಲ್ ತಾಲೂಕಿನ ಮೊರಾರ್ಜಿ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎರಡ್ಮೂರು ದಿನಗಳ ಹಿಂದೆ ನೆಗಡಿ,ಕೆಮ್ಮು ಜ್ವರದಿಂದ ಬಳಲುತ್ತಿದ್ದ ಯುವತಿ ಆರೋಗ್ಯ ತಪಾಸಣೆ ಗೆ ತಾಲೂಕ ಆಸ್ಪತ್ರೆಗೆ ಬಂದಿದ್ದಳು. ಕೋವಿಡ್-19 ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ಶುಕ್ರವಾರ ಕೋವಿಡ ಪರೀಕ್ಷೆಗೆ ಒಳಪಡಿಸಿ ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಕೊಡಲಾಗಿತ್ತು. ಶನಿವಾರ ಕೋವಿಡ್ 19 ವರದಿ ದೃಢವಾಗಿದೆ.

ತಾಲೂಕು ಆರೋಗ್ಯಧಿಕಾರಿಗಳು ಮತ್ತು ಸಿಬ್ಬಂದಿಗಳು ಯುವತಿಯ ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿದಲ್ಲದೆ ಮನೆಯಲ್ಲಿ ಏಳು ದಿನಗಳ ಕಾಲ ಹೋಮ್ ಐಸೋಲೇಷನಲ್ಲಿ ಇರುವಂತೆ ಆರೋಗ್ಯ ಶಿಕ್ಷಣ ನೀಡಲಾಗಿದೆ. ಮನೆಯಲ್ಲಿ, ನೆರೆಹೊರೆಯದವರಿಗೆ ನೆಗಡಿ, ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯ ಲಕ್ಷಣಗಳು ಕಂಡು ಬಂದರೆ ಕೂಡಲೇ ತಾಲೂಕು ಆಸ್ಪತ್ರೆಯ ವೈದ್ಯರ ನ್ನು ಭೇಟಿಯಾಗಿ ಚಿಕಿತ್ಸೆ ಪಡೆದು ಮುಂಜಾಗ್ರತೆಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕೈಗಳನ್ನು ಆಗಾಗ ತೊಳೆದುಕೊಳ್ಳುವಂತೆ ಯುವತಿಗೆ ಆರೋಗ್ಯ ಶಿಕ್ಷಣ ನೀಡಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ನರೇಂದ್ರ ಪವಾರ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!